Thursday, September 17, 2026

BDA Apartments

ದಸರಾ ಗಜಪಡೆ ಸಿಬ್ಬಂದಿ ಕೊರೊನಾ ವರದಿ ನೆಗೆಟಿವ್ : ತಾಲೀಮು ಆರಂಭ BDA JK_Adv BDA Adv
Home Front Page ದಸರಾ ಗಜಪಡೆ ಸಿಬ್ಬಂದಿ ಕೊರೊನಾ ವರದಿ ನೆಗೆಟಿವ್ : ತಾಲೀಮು ಆರಂಭ

ದಸರಾ ಗಜಪಡೆ ಸಿಬ್ಬಂದಿ ಕೊರೊನಾ ವರದಿ ನೆಗೆಟಿವ್ : ತಾಲೀಮು ಆರಂಭ

ಮೈಸೂರು,ಅಕ್ಟೊಂಬರ್,04,2020(www.justkannada.in) ; ದಸರಾ ಗಜಪಡೆಯ ಎಲ್ಲಾ ಸಿಬ್ಬಂದಿಗಳ ಕೊರೊನಾ ವರದಿಯು ನೆಗೆಟಿವ್ ಬಂದಿದೆ.jk-logo-justkannada-logo

ಜಿಲ್ಲಾ ಆರೋಗ್ಯಾಧಿಕಾರಿ ನೇತೃತ್ವದಲ್ಲಿ ನಿನ್ನೆಯಷ್ಟೇ ಗಜಪಡೆಯ ಮಾವುತ, ಕಾವಾಡಿಗಳಿಗೆ ಕೋವಿಡ್ ಟೆಸ್ಟ್ ಮಾಡಲಾಗಿತ್ತು. ಮಾವುತ ಕಾವಾಡಿಗಳು ಹಾಗೂ ಸಹಾಯಕ ಸಿಬ್ಬಂದಿ ಸೇರಿ 25 ಮಂದಿ ವರದಿ ನೆಗೆಟಿವ್ ಆಗಿದೆ.

Dasara-2020-Mysore-All-staff- report-gajapade-negative

ಜಿಲ್ಲಾಡಳಿತದಿಂದ ಮುನ್ನೆಚ್ಚರಿಕಾ ಕ್ರಮವಾಗಿ ಕೊರೊನಾ ಟೆಸ್ಟ್ ಮಾಡಲಾಗಿತ್ತು. ಮಾವುತ ಕಾವಾಡಿಗಳ ನೆಗೆಟಿವ್ ವರದಿಯಿಂದ ಅಧಿಕಾರಿಗಳು ನಿಟ್ಟುಸಿರು ಬಿಡುವಂತ್ತಾಗಿದೆ.

ಅ್ಯಂಟಿಜನ್ ರ್ಯಾಪಿಡ್ ಡ್ ಟೆಸ್ಟ್ ಮಾಡಿಸಿಕೊಳ್ಳಲು ಮಾವುತ, ಕಾವಾಡಿಗಳು ಹಿಂದೇಟು ಹಾಕಿದ್ದರು. ಬಳಿಕ ಅವರ ಅರಣ್ಯಾಧಿಕಾರಿಗಳು ಮನವೊಲಿಸಿ ಕೊರೊನಾ ಟೆಸ್ಟ್ ಮಾಡಿಸಿದ್ದರು.

ಅಭಿಮನ್ಯು ಟೀಂ ತಾಲೀಮು ಪ್ರಾರಂಭ

ವಿಶ್ವವಿಖ್ಯಾತ ಮೈಸೂರು ದಸರಾ ೨೦೨೦. ಕೋರೊನ ಮಾವುತರು ಕಾವಾಡಿಗಳಿಗೆ ವರದಿ ನೆಗೆಟಿವ್ ಬಂದ ಹಿನ್ನೆಲೆ. ಅಭಿಮನ್ಯು  ಟೀಂ ತಾಲೀಮು ಪ್ರಾರಂಭಿಸಿದ್ದಾರೆ. ಕ್ಯಾಪ್ಟನ್ ಅಭಿಮನ್ಯು ಮುಂದಾಳತ್ವದಲ್ಲಿ ನೆನ್ನೆ ಸಂಜೆಯಿಂದಲೆ ಅರಮನೆ ಒಳಭಾಗದಲ್ಲಿ ಗಜಪಡೆ ತಾಲೀಮು ಆರಂಭಿಸಲಾಗಿತ್ತು. ಬೆಳಗ್ಗೆ ಮತ್ತು ಸಂಜೆ ಆನೆಗಳ ತಾಲೀಮು ನಡೆಯಲಿದ್ದು, ಗಜಪಡೆ ತಾಲೀಮಿನ ವೇಳೆ ಪ್ರಾವಾಸಿಗರು ಸಾರ್ವಜನಿಕರಿಗೆ ನಿರ್ಬಂಧ ವಿಧಿಸಲಾಗಿದೆ.

key words : Dasara-2020-Mysore-All-staff- report-gajapade-negative