Tuesday, October 6, 2026

BDA Apartments

immense respect BDA JK_Adv BDA Adv
Home Cinema ದಸರಾ ಚಲನಚಿತ್ರೋತ್ಸವ: ಸಿನಿಪ್ರಿಯರಿಗೆ ಸುಲಭ ರೀತಿಯಲ್ಲಿ ಟಿಕೆಟ್ ಲಭ್ಯ

ದಸರಾ ಚಲನಚಿತ್ರೋತ್ಸವ: ಸಿನಿಪ್ರಿಯರಿಗೆ ಸುಲಭ ರೀತಿಯಲ್ಲಿ ಟಿಕೆಟ್ ಲಭ್ಯ

ಮೈಸೂರು,ಸೆಪ್ಟಂಬರ್,30, 2024 (www.justkannada.in): ಸಾರ್ವಜನಿಕರಿಗೆ ಅನುಕೂಲವಾಗುವಂತೆ ಜೂ ಮುಂಭಾಗ, ಸಿಟಿ ಬಸ್ ಸ್ಟ್ಯಾಂಡ್ ಹಾಗೂ ಯುವ ಸಂಭ್ರಮ ವೇದಿಕೆಯ ಮುಂಭಾಗದಲ್ಲಿ ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವದ ದಸರಾ ಚಲನಚಿತ್ರೋತ್ಸವದ ಕಿಯೋಸ್ಕ್ ಗಳನ್ನು ಸ್ಥಾಪಿಸಲಾಗಿದ್ದು, ಇದೀಗ ಸಾರ್ವಜನಿಕರು ಯಾವುದೇ ತೊಂದರೆಯಿಲ್ಲದಂತೆ ಚಲನಚಿತ್ರೋತ್ಸವದ ಪಾಸ್ ಗಳನ್ನು ಪಡೆಯಬಹುದಾಗಿದೆ.

ದಸರಾ ಚಲನಚಿತ್ರೋತ್ಸವವು ಅಕ್ಟೋಬರ್ 04 ರಿಂದ ಅಕ್ಟೋಬರ್ 10 ರವರೆಗೆ ಮಾಲ್ ಆಫ್  ಮೈಸೂರಿನ ಐನಾಕ್ಸ್ ಮತ್ತು ಬಿ ಎಂ ಹ್ಯಾಬಿಡೆಟ್ ಮಾಲ್ ನ ಡಿ. ಆರ್. ಸಿ ಚಿತ್ರಮಂದಿರಗಳಲ್ಲಿ ಅದ್ದೂರಿಯಾಗಿ ನಡೆಯಲಿದ್ದು, ಸಾರ್ವಜನಿಕರು ಕಡಿಮೆ ವೆಚ್ಚದಲ್ಲಿ ಕನ್ನಡ ಸೇರಿದಂತೆ, ತಮಿಳು, ಇಂಗ್ಲಿಷ್ ಸೇರಿದಂತೆ ಇನ್ನಿತರ ಭಾಷೆಯ 100 ಕ್ಕೂ ಅಧಿಕ ಸಿನಿಮಾ ವೀಕ್ಷಿಸಬಹುದಾಗಿದೆ.

ವಿದ್ಯಾರ್ಥಿಗಳು ಮತ್ತು ಹಿರಿಯ ನಾಗರಿಕರು 300 ರೂ ಹಾಗೂ ಇತರರು 500 ರೂ ಗಳನ್ನು ಪಾವತಿಸಿ ಚಲನಚಿತ್ರೋತ್ಸವದ  ಪಾಸ್ ಗಳನ್ನು ಪಡೆಯಬಹುದಾಗಿದ್ದು, ಆದಷ್ಟು ಬೇಗ ಟಿಕೆಟ್ ಖರೀದಿಸುವ ಮೂಲಕ  ಇದರ ಸದುಪಯೋಗ ಪಡೆದುಕೊಳ್ಳಬಹುದಾಗಿದೆ.

ದಸರಾ ಚಲನಚಿತ್ರೋತ್ಸವ: ಸಿನಿಪ್ರಿಯರಿಗೆ ಸುಲಭ ರೀತಿಯಲ್ಲಿ ಟಿಕೆಟ್ ಲಭ್ಯ VTU TOP BA...

Key words: dasara Film Festival, Tickets, available, easily