ಮಾಸಾಂತ್ಯಕ್ಕೆ ಕಿರುತೆರೆಗೆ ಬರುತ್ತಿದ್ದಾರೆ ಹಿಂದಿ ಡಬ್ ‘ರಾಬರ್ಟ್’!

ಬೆಂಗಳೂರು, ಆಗಸ್ಟ್ 18, 2021 (www.justkannada.in): ಸ್ಯಾಂಡಲ್‌ವುಡ್‌ ಬಾಕ್ಸ್ ಆಫೀಸ್ ಧೂಳ್ ಎಬ್ಬಿಸಿದ ರಾಬರ್ಟ್ ಈಗ ಬಾಲಿವುಡ್ ಕಿರುತೆರೆಯಲ್ಲಿ ಬರುತ್ತಿದೆ.

ಆಗಸ್ಟ್ 29 ರಂದು ಮೊಟ್ಟ ಮೊದಲ ಬಾರಿಗೆ ಹಿಂದಿಯಲ್ಲಿ ರಾಬರ್ಟ್ ಪ್ರದರ್ಶನವಾಗಲಿದೆ.

ಕಲರ್ಸ್ ಸಿನಿಪ್ಲೆಕ್ಸ್ ವಾಹಿನಿಯಲ್ಲಿ ಮಧ್ಯಾಹ್ನ 12 ಗಂಟೆಗೆ ಚಿತ್ರ ಪ್ರಸಾರವಾಗಲಿದೆ. ಹಿಂದಿಯ ಪ್ರೋಮೋ ಸಹ ಬಿಡುಗಡೆಯಾಗಿದೆ.

ನಟ ದರ್ಶನ್ ನಾಯಕನಾಗಿ ನಟಿಸಿರುವ ಈ ಚಿತ್ರವನ್ನು ತರುಣ್ ಸುಧೀರ್ ನಿರ್ದೇಶಿಸಿದ್ದರು. ಆಶಾ ಭಟ್ ನಾಯಕಿಯಾಗಿ ಅಭಿನಯಿಸಿದ್ದರು. ವಿನೋದ್ ಪ್ರಭಾಕರ್, ಸೊನಾಲ್ ಇತರರು ನಟಿಸಿದ್ದರು.