ತೆಲುಗಿನಲ್ಲೂ ಚಾಲೆಂಜಿಂಗ್ ಸ್ಟಾರ್ ‘ರಾಬರ್ಟ್’ ರಿಲೀಸ್

ಬೆಂಗಳೂರು, ಜನವರಿ 27, 2021 (www.justkannada.in): ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ರಿಲೀಸ್ ಡೇಟ್ ಈಗಾಗಲೇ ಘೋಷಣೆಯಾಗಿದೆ.

ವಿಶೇಷ ಎಂದರೆ ಚಿತ್ರ ತೆಲುಗಿನಲ್ಲಿ ಸಹ ಮಾರ್ಚ್ 11 ರಂದು ಬಿಡುಗಡೆಯಾಗುತ್ತಿದೆ.

ಹೊಸ ಪೋಸ್ಟರ್ ರಿಲೀಸ್ ಮಾಡುವ ಮೂಲಕ ಗಣರಾಜ್ಯೋತ್ಸವದಂದು ಈ ವಿಷಯವನ್ನು ಅಧಿಕೃತವಾಗಿ ಘೋಷಣೆ ಮಾಡಲಾಗಿದೆ.

ಸಿನಿಮಾ ಬಿಡುಗಡೆ ಘೋಷಿಸಿದ ನಿರ್ದೇಶಕ ತರುಣ್ ಕಿಶೋರ್ ಸುಧೀರ್, ಮುಂದಿನ ದಿನಗಳಲ್ಲಿ ತೆಲುಗಿನ ಟೀಸರ್ ಬಿಡುಗಡೆಯಾಗಲಿದೆ ಎಂದಿದ್ದಾರೆ.