Wednesday, October 7, 2026

BDA Apartments

ನಟಿ ‘ಕೃಷಿ ತಾಪಂಡ’ ಮನೆಯಲ್ಲಿ ಸ್ನೇಹಿತ ಆತ್ಮಹತ್ಯೆಗೆ ಶರಣು BDA JK_Adv BDA Adv
Home Cinema ರಾಬರ್ಟ್ ವಿಜಯಯಾತ್ರೆ: ನಿಮ್ಮೂರಿಗೂ ಬರಲಿದ್ದಾರೆ ಡಿ ಬಾಸ್

ರಾಬರ್ಟ್ ವಿಜಯಯಾತ್ರೆ: ನಿಮ್ಮೂರಿಗೂ ಬರಲಿದ್ದಾರೆ ಡಿ ಬಾಸ್

ಬೆಂಗಳೂರು, ಮಾರ್ಚ್ 24, 2021 (www.justkannada.in): 

ರಾಬರ್ಟ್ ಸಿನಿಮಾ ವಿಜಯೋತ್ಸವದ ಅಂಗವಾಗಿ ಅಭಿಮಾನಿಗಳಿಗೆ ಧನ್ಯವಾದ ಹೇಳಲು ಡಿಬಾಸ್ ದರ್ಶನ್ ನಿಮ್ಮೂರಿಗೆ ಬರಲಿದ್ದಾರೆ.

ಯೆಸ್. ರಾಬರ್ಟ್ ಕನ್ನಡ ಹಾಗೂ ತೆಲುಗು ಚಿತ್ರರಂಗದಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಈ ಖುಷಿಯಲ್ಲಿರುವ ದಚ್ಚು ಆ್ಯಂಡ್ ಟೀಂ ವಿಜಯಯಾತ್ರೆ ನಡೆಸಲು ತೀರ್ಮಾನಿಸಿದೆ.

ಸಿನಿಮಾದ ವಿಜಯಯಾತ್ರೆ ದಿನಾಂಕವನ್ನ ಚಿತ್ರತಂಡ ಅನೌನ್ಸ್​ ಮಾಡಿದೆ. 4 ದಿನ ಚಿತ್ರತಂಡ ಹಲವು ಜಿಲ್ಲೆಗಳಿಗೆ ಭೇಟಿ ನೀಡಲಿದೆ.

ಮಾರ್ಚ್ 29ರಂದು ತುಮಕೂರು, ಚಿತ್ರದುರ್ಗ, ದಾವಣಗೆರೆ, 30ರಂದು ಧಾರವಾಡ, ಹುಬ್ಬಳ್ಳಿ, ಹಾವೇರಿ, ಮಾರ್ಚ್ 31ರಂದು ಶಿವಮೊಗ್ಗ, ಹಾಸನ, ತಿಪಟೂರು, ಏಪ್ರಿಲ್ 1ರಂದು ಗುಂಡ್ಲುಪೇಟೆ, ಮೈಸೂರು, ಮಂಡ್ಯ ಹಾಗೂ ಮದ್ದೂರಿಗೆ ರಾಬರ್ಟ್ ಚಿತ್ರತಂಡ ಭೇಟಿ ನೀಡಲಿದೆ‌.