ಮೈಸೂರು,ಆಗಸ್ಟ್,15,2025 (www.justkannada.in): ನಟ ದರ್ಶನ್ ಆತುರದ ನಿರ್ಧಾರವೇ ಬೇಲ್ ಕ್ಯಾನ್ಸಲ್ ಆಗಲು ಕಾರಣ ಎಂದು ನಿವೃತ್ತ ಹಿರಿಯ ಪೊಲೀಸ್ ಅಧಿಕಾರಿ ಜಿ.ಎನ್.ಮೋಹನ್ ಹೇಳಿದ್ದಾರೆ.
ನಟ ದರ್ಶನ್ ಜಾಮೀನು ರದ್ದು ಕುರಿತು ಮಾತನಾಡಿದ ಜಿ.ಎನ್.ಮೋಹನ್, ಹೈಕೋರ್ಟ್ ಮಾಡಿದ ತಪ್ಪುಗಳನ್ನ ಸುಪ್ರೀಂಕೋರ್ಟ್ ಎಳೆ ಎಳೆಯಾಗಿ ಬಿಚ್ಚಿಟ್ಟಿದೆ. ಈ ತೀರ್ಪು ಸತ್ಯಕ್ಕೆ ಸಿಕ್ಕ ಜಯ. ನಟ ದರ್ಶನ್ ಗೆ ಜೀವಾವಧಿ ಶಿಕ್ಷೆ ಆಗಬಹುದು. ಇನ್ನೂ ಆರು ತಿಂಗಳಿಂದ ವರ್ಷದವರೆಗೆ ಜೈಲಿನಲ್ಲಿರುತ್ತಾರೆ. ಟ್ರಯಲ್ ಮುಗಿದು ಶಿಕ್ಷೆ ಆಗುವವರೆಗೆ ಜೈಲೇ ಗತಿ ಎಂದರು.
ಇದೊಂದು ಅದ್ಭುತ, ಐತಿಹಾಸಿಕ ತೀರ್ಪು ಅನಿಸುತ್ತೆ
ಹೈಕೋರ್ಟ್ ಬೇಲ್ ನೀಡದಾಗಲೇ ಬೇಸರವಾಗಿತ್ತು. ಹೈಕೋರ್ಟ್ ತೀರ್ಪಿನ ಮೇಲೆ ಅನುಮಾನ ಮೂಡಿತ್ತು. ಎಲ್ಲಾ ಹೈಡ್ರಾಮಗಳೇ ಅವರಿಗೆ ಈಗ ಮುಳುವಾಗಿವೆ. ದರ್ಶನ್ ಬೇಲ್ ಪಡೆಯುವಲ್ಲಿ ತುಂಬಾ ಆತುರಪಟ್ಟರು. ಸ್ವಲ್ಪ ದಿನದವರೆಗೆ ಕಾದಿದ್ದರೆ ಎಲ್ಲವೂ ಸರಿ ಆಗುತ್ತಿತ್ತು. ಯಾವೆಲ್ಲ ರೀತಿ ಡ್ರಾಮ ಮಾಡಿ ಬೇಲ್ ಪಡೆದರು ಎಂಬುದನ್ನ ಕೋರ್ಟ್ ಗಮನಿಸಿದೆ. ರಾಜ್ಯದ ಪೊಲೀಸರು ಈ ಪ್ರಕರಣದಲ್ಲಿ ಅದ್ಭುತ ಸಾಕ್ಷಿಗಳನ್ನ ಸಂಗ್ರಹಿಸಿದ್ದಾರೆ. ವಕೀಲರು ಸುಪ್ರೀಂಕೋರ್ಟ್ ನಲ್ಲಿ ಅದ್ಭುತವಾಗಿ ವಾದ ಮಾಡಿ ವಿವರಿಸಿದ್ದಾರೆ. ಜಡ್ಜ್ ಬರೆದಿರುವ ತೀರ್ಪು ನೋಡುತ್ತಿದ್ದರೆ ಮೈ ಜುಮ್ಮೆನಿಸುತ್ತೆ. ಇದೊಂದು ಅದ್ಭುತ, ಐತಿಹಾಸಿಕ ತೀರ್ಪು ಅನಿಸುತ್ತೆ. ಯಾವುದೇ ಅಪರಾಧ ಮಾಡುವವರಿಗೆ ಇದೊಂದು ಪಾಠ ಎಂದು ಜಿ.ಎನ್ ಮೋಹನ್ ತಿಳಿಸಿದರು.
ದರ್ಶನ್ ಚಿಕ್ಕಂದಿನಿಂದ ನಾನು ನೋಡಿರುವ ಹುಡುಗ. ಅವನಿಗೆ ಒಳ್ಳೆಯ ಬದುಕು, ಜೀವನವಿತ್ತು. ಅವನ ಕೈಯ್ಯಾರೆ ಅವನು ಎಲ್ಲ ಹಾಳು ಮಾಡಿಕೊಂಡ. ಯಾರೇ ಆಗಲಿ, ದೊಡ್ಡವರೇ ಇರಲಿ, ಸಣ್ಣವರೇ ಇರಲಿ ಕಾನೂನು ಎಲ್ಲರಿಗೂ ಒಂದೇ ಅವರ ಅಭಿಮಾನಿಗಳ ಅತಿರೇಕದ ವರ್ತನೆ ಕೂಡ ಮುಳುವಾಗುವುದರಲ್ಲಿ ಅನುಮಾನವಿಲ್ಲ ಎಂದು ನಿವೃತ್ತ ಹಿರಿಯ ಪೊಲೀಸ್ ಅಧಿಕಾರಿ ಮೋಹನ್ ಅವರು ತಿಳಿಸಿದರು.
Key words: Actor, Darshan, bail, cancellation, Retired senior police officer, GN Mohan