”ಬಾಬೂ ಜಗಜೀವನರಾಮ್ ವಿಚಾರಧಾರೆ ಕುರಿತ ವೆಬಿನಾರ್ ಸರಣಿ” : ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಚಾಲನೆ…!

0
203

ಮೈಸೂರು,ಜನವರಿ,04,2021(www.justkannada.in): ಆಧುನಿಕ ಭಾರತದ ನಿರ್ಮಾತೃಗಳಲ್ಲಿ ಒಬ್ಬರಾಗಿ, ಶೋಷಿತ ಸಮುದಾಯಗಳ ಭರವಸೆಯ ಆಶಾಕಿರಣವಾಗಿ ಚರಿತ್ರೆಯ ಪುಟಗಳಲ್ಲಿ ತಮ್ಮದೇ ವಿಶಿಷ್ಟ ಛಾಪನ್ನು ಮೂಡಿಸಿರುವ ಡಾ.ಬಾಬೂ ಜಗಜೀವರಾಮ್ ದೇಶದ ಹೆಮ್ಮೆಯ ಪ್ರತೀಕ ಎಂದು ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಹೇಳಿದರು.

ಮಾನಸಗಂಗೋತ್ರಿಯ ವಿಜ್ಞಾನಭವನದಲ್ಲಿ ಮೈಸೂರು ವಿವಿ ಡಾ.ಬಾಬೂ ಜಗಜೀವನರಾಮ್ ಅಧ್ಯಯನ, ಸಂಶೋಧನ ಮತ್ತು ವಿಸ್ತರಣ ಕೇಂದ್ರದ ವತಿಯಿಂದ ಆಯೋಜಿಸಿದ್ದ ‘’ಬಾಬೂ ಜಗಜೀವನರಾಮ್ ವಿಚಾರಧಾರೆ ಕುರಿತ ವೆಬಿನಾರ್ ಸರಣಿಗಳು’’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಬಾಬೂ ಜಗಜೀವರಾಮ್ ಅವರ ಜೀವಮಾನದ ಸಾಧನೆಗಳು ಹಾಗೂ ಮಹೋನ್ನತ ಕೊಡುಗೆಗಳು ಅವಿಸ್ಮರಣೀಯವಾದುದು. ಇಂತಹ ಶ್ರೇಷ್ಠ ನಾಯಕರಾದ ಬಾಬೂಜಿಯವರು ತಮ್ಮ ಜೀವಿತಾವಧಿಯಲ್ಲಿ ಅನ್ಯಾಯದ ವಿರುದ್ಧ ಹೋರಾಡಿದ ಕ್ರಮಗಳು, ಸಾಧಿಸಿದ ಪ್ರಗತಿಪರ ಧೋರಣೆಗಳು ಇಂದಿಗೂ ಜೀವಂತವಾಗಿದೆ ಎಂದು ಸ್ಮರಿಸಿದರು.

ಅವರಿಂದ ಸ್ಪೂರ್ತಿಪಡೆದ ದೀನದಲಿತರು ಅನ್ಯಾಯದ ವಿರುದ್ಧ ಪ್ರತಿಭಟಿಸುವ ಶಕ್ತಿ ಪಡೆದಿದ್ದಾರೆ.  ಪ್ರಸ್ತುತ ಸಮಾಜಕ್ಕೆ ಸ್ಪೂರ್ತಿಯ, ಭರವಸೆಯ ಸಂಕೇತವಾದ ಬಾಬೂಜಿಯವರ ಜೀವಮಾನ ಸಾಧನೆಗಳ ಕಥನವನ್ನು ಇಂದಿನ ಜನಮಾನಸದಲ್ಲಿ ಬಿತ್ತುವ ದೃಷ್ಟಿಯಿಂದ 2001ರಲ್ಲಿ ಮೈಸೂರು ವಿವಿ ಡಾ.ಬಾಬೂ ಜಗಜೀವನರಾಮ್ ಅಧ್ಯಯನ, ಸಂಶೋಧನೆ ಮತ್ತು ವಿಸ್ತರಣ ಕೇಂದ್ರ ಸ್ಥಾಪಿಸಿತು ಎಂದರು.

ಈ ಕೇಂದ್ರವು ಹಂತಹಂತವಾಗಿ ಶೈಕ್ಷಣಿಕ ಕಾರ್ಯಕ್ರಮಗಳನ್ನು ಏರ್ಪಡಿಸುವ ಮೂಲಕ ಯುವಪೀಳಿಗೆಯಲ್ಲಿ ಮತ್ತು ಜನಸಾಮಾನ್ಯರಲ್ಲಿ ಬಾಬೂಜಿಯವರ ಜೀವನ ಮತ್ತು ಸಾಧನೆಗಳ ಮಹತ್ವದ ಬಗೆಗೆ ಅರಿವನ್ನುಂಟು ಮಾಡುವ ಕಾರ್ಯವನ್ನು ನಿರಂತರವಾಗಿ ಮಾಡುತ್ತಿದೆ ಎಂದು ಮೆಚ್ಚುಗೆವ್ಯಕ್ತಪಡಿಸಿದರು.

ಈ ಕೇಂದ್ರದ ಆಶ್ರಯದಲ್ಲಿ ಬಾಬೂಜಿ ಕುರಿತಂತೆ ಅಧ್ಯಯನ ಮತ್ತು ಸಂಶೋಧನೆ ಕಾರ್ಯಗಳು ನಡೆಯುತ್ತಿವೆ. ಬಾಬೂಜಿ ಅವರ ಬದುಕು, ಸಾಧನೆ ಮತ್ತು ಜೀವನ ಸಂದೇಶಗಳನ್ನು ಗ್ರಾಮಾಂತರ ಪ್ರದೇಶದ ಜನತೆಗೆ ತಲುಪಿಸವು ಕಾರ್ಯವನ್ನು ಮಾಡಲಾಗುತ್ತಿದೆ ಎಂದರು.

ಬಾಬೂ ಜಗಜೀವರಾಮ್  ಅವರು ಶ್ರೇಷ್ಠ ವಾಗ್ಮಿ, ಸ್ವಾತಂತ್ರ ಹೋರಾಟಗಾರ, ದಲಿತ ಮುಖಂಡ, ದಕ್ಷ ರಾಜಕಾರಣಿ, ಸಾಮಾಜಿಕ ಚಿಂತಕ, ದಾರ್ಶನಿಕ, ಸಮಾನತೆ, ಹಸಿರು ಕ್ರಾಂತಿಯ ಹರಿಕಾರರಾಗಿದ್ದಾರೆ. ಅವರು ಪಡೆದ ಸರ್ವ ಸ್ಥಾನಮಾನಗಳು ಅವರ ನಾಯಕತ್ವದ ಪ್ರಬುದ್ಧತೆಯ ಧ್ಯೋತಕವಾಗಿದೆ ಎಂದು ಹೇಳಿದರು.

ಮೈಸೂರು ವಿವಿ ಕುಲಸಚಿವ ಪ್ರೊ.ಆರ್.ಶಿವಪ್ಪ ಮಾತನಾಡಿ, ಬಾಬೂ ಜಗಜೀವರಾಮ್ ಅವರು ತಳಸಮುದಾಯದ ಬಗ್ಗೆ ವಿಶೇಷ ಕಾಳಜಿಯುಳ್ಳ ವ್ಯಕ್ತಿಯಾಗಿದ್ದರು. ಬುದ್ಧಭೂಮಿಯಿಂದ ಬಂದ ಅವರು ಅನೇಕ ಅಭಿವೃದ್ಧಿ ಕಾರ್ಯವನ್ನು ಮಾಡಿದ್ದಾರೆ. ಸಮಾನತೆ ದೃಷ್ಟಿಯಿಂದ ಹೋರಾಡಿದವರಲ್ಲಿ ಪ್ರಮುಖರಾಗಿದ್ದಾರೆ ಎಂದು ಸ್ಮರಿಸಿದರು.

ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ.ಬಿ.ವಿ.ವಸಂತಕುಮಾರ್ ”ಬಾಬೂ ಜಗಜೀವನರಾಮ್ ಪರಿಕಲ್ಪನೆಯ ರಾಷ್ಟ್ರೀಯವಾದ” ವಿಷಯ ಕುರಿತು ಮಾತನಾಡಿ, ಬಾಬುಜಗಜೀವನರಾಮ್ ಅವರು ಅಂಬೇಡ್ಕರ್, ಗಾಂಧಿ ಕನಸುಗಳ ನನಸಾಗಿಸಲು ದುಡಿದರು. ವಿಚಾರಕ್ಕೆ ನಮ್ಮಲ್ಲಿ ಕೊರತೆಯಿಲ್ಲ. ಆದರೆ, ಅನುಷ್ಠಾನದಲ್ಲಿ ಸೋತಿದ್ದೇವೆ. ಇದರಿಂದಾಗಿ ಸಾವಿರಾರು ವರ್ಷ ಗುಲಾಮತನ ಅನುಭವಿಸಿದ್ದೇವೆ ಎಂದರು.

ಬಾಬುಜಗಜೀವನರಾಮ್ ಅವರದು ಸೇತುವೆ ಪರಿಕಲ್ಪನೆಯಾಗಿತ್ತು. ಸಿದ್ದಾಂತ, ಸಿದ್ದಾಂತದ ನಡುವೆ, ಮನುಷ್ಯ, ಮನುಷ್ಯನ ನಡುವೆ ಸೇತುವೆಯಂತೆ ಒಂದುಗೂಡಿಸುವ ಕಾರ್ಯಮಾಡಿದರು ಎಂದು ಸ್ಮರಿಸಿದರು.'' Da.Baboo Jagjivanaraam-Quizzes-About-Webinar-Series-Chancellor-Prof.G.Hemant Kumarನನ್ನ ಬದುಕಿನ ಮೂಲಕ ನನ್ನ ಅರ್ಥಮಾಡಿಕೊಳ್ಳಿ ಎಂದು ಹೇಳಿದಂತಹ ವ್ಯಕ್ತಿಯಾಗಿದ್ದು, ಜಾತಿ ಮೀರಿದಂತಹ ಸಂತರಾಗಿದ್ದಾರೆ. ದೇಶವನ್ನು ಕಟ್ಟುವುದಕ್ಕೆ ಸಂತನಂತಹ ಗುಣಗಳು ಬಹಳ ಮುಖ್ಯ ಎಂದು ತಿಳಿಸಿದರು.

ಡಾ.ಬಾಬೂ ಜಗಜೀವನರಾಮ್ ಅಧ್ಯಯನ ಕೇಂದ್ರದ ನಿರ್ದೇಶಕ ಪ್ರೊ.ಕೆ.ಸದಾಶಿವ ಬಾಬೂ ಜಗಜೀವನರಾಮ್ ರಾಷ್ಟ್ರೀಯವಾದ ವಿಶ್ಲೇಷಣೆ ಕುರಿತು ವಿಷಯ ಮಂಡಿಸಿದರು.

key words : ” Da.Baboo Jagjivanaraam-Quizzes-About-Webinar-Series-Chancellor-Prof.G.Hemant Kumar