ಸಿಎಂ ಸಿದ್ದು ಸು”ಭದ್ರ”; ಡಿಕೆಶಿಗೆ “ಗೃಹ”, ಡಿಕೆಸುಗೆ “ರಾಜ್ಯಸಭಾ” ಸ್ಥಾನ..? ಹೈಕಮಾಂಡ್‌ ತಂತ್ರ .!

Speculation is rife within Congress circles that the party high command is working on a formula to ease the Chief Ministerial tussle in Karnataka. As part of the strategy, Deputy CM D. K. Shivakumar may reportedly be given the Home portfolio, while his brother D. K. Suresh could be nominated to the Rajya Sabha.

ಬೆಂಗಳೂರು: ರಾಜ್ಯ ಕಾಂಗ್ರೆಸ್‌ನಲ್ಲಿ ಮತ್ತೆ ಮುಖ್ಯಮಂತ್ರಿ ಹುದ್ದೆ ಕುರಿತ ಚರ್ಚೆಗಳು ಜೋರಾಗಿರುವ ಬೆನ್ನಲ್ಲೇ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ (D. K. Shivakumar)  ಅವರಿಗೆ ಗೃಹಖಾತೆ ನೀಡುವ ಹಾಗೂ ಅವರ ಸಹೋದರ ಡಿ.ಕೆ.ಸುರೇಶ್‌ (D. K. Suresh)  ಅವರಿಗೆ ರಾಜ್ಯಸಭಾ ಸ್ಥಾನ ನೀಡುವ ಮೂಲಕ ಒಳಗಣ್ಣಿನ ಅಸಮಾಧಾನ ತಣಿಸುವ ತಂತ್ರವನ್ನು ಕಾಂಗ್ರೆಸ್ ಹೈಕಮಾಂಡ್ ರೂಪಿಸಿದೆ ಎಂಬ ರಾಜಕೀಯ ವಲಯದಲ್ಲಿ ಭಾರೀ ಚರ್ಚೆ ಶುರುವಾಗಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಮತ್ತು ಡಿ.ಕೆ. ಶಿವಕುಮಾರ್ ನಡುವಿನ ನಾಯಕತ್ವದ ಸಮತೋಲನ ಕಾಪಾಡಲು ದೆಹಲಿಯಲ್ಲಿ ತೀವ್ರ ಮಟ್ಟದ ಚರ್ಚೆಗಳು ನಡೆಯುತ್ತಿವೆ ಎನ್ನಲಾಗುತ್ತಿದೆ. ಮುಖ್ಯಮಂತ್ರಿ ಹುದ್ದೆಯ ಗೊಂದಲ ಮುಂದಿನ ದಿನಗಳಲ್ಲಿ ಸರ್ಕಾರದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ, ಹೈಕಮಾಂಡ್ ರಾಜಕೀಯ ಸಮನ್ವಯದ ಸೂತ್ರ ಹಿಡಿದಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಈ ಎಲ್ಲಾ ಬೆಳವಣಿಗೆಗಳ ನಡುವೆ ಸಿಎಂ ಸಿದ್ದರಾಮಯ್ಯ ಇಂದು ದೆಹಲಿಗೆ ದೌಡಾಯಿಸಿರುವುದು ಹಲವು ಅನುಮಾನಗಳಿಗೆ ಪುಷ್ಠಿ ನೀಡಿದೆ. ದೆಹಲಿ ಭೇಟಿಯ ವೇಳೆ ಕಾಂಗ್ರೆಸ್ ಹಿರಿಯ ನಾಯಕರೊಂದಿಗೆ ರಾಜ್ಯ ರಾಜಕೀಯ ಬೆಳವಣಿಗೆಗಳ ಬಗ್ಗೆ ಮಹತ್ವದ ಚರ್ಚೆ ನಡೆಯುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಇನ್ನೊಂದೆಡೆ, ಡಿ.ಕೆ. ಶಿವಕುಮಾರ್ ಅವರಿಗೆ ಗೃಹಖಾತೆ ನೀಡುವ ಸಾಧ್ಯತೆ ಕುರಿತ ಚರ್ಚೆ ರಾಜಕೀಯ ವಲಯದಲ್ಲಿ ಹೊಸ ಕುತೂಹಲ ಮೂಡಿಸಿದೆ. ಪ್ರಸ್ತುತ ಗೃಹಖಾತೆ ಸರ್ಕಾರದ ಅತ್ಯಂತ ಪ್ರಭಾವಿ ಇಲಾಖೆಗಳಲ್ಲೊಂದು ಎನ್ನಲಾಗುತ್ತಿದ್ದು, ಈ ಬದಲಾವಣೆ ಕಾಂಗ್ರೆಸ್ ಒಳರಾಜಕೀಯದಲ್ಲಿ ದೊಡ್ಡ ಸಂದೇಶ ನೀಡಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಅದೇ ವೇಳೆ ಡಿ.ಕೆ. ಸುರೇಶ್ ಅವರನ್ನು ರಾಜ್ಯಸಭೆಗೆ ಕಳುಹಿಸುವ ಮೂಲಕ ಡಿ.ಕೆ. ಕುಟುಂಬಕ್ಕೆ ಹೆಚ್ಚಿನ ರಾಜಕೀಯ ಬಲ ನೀಡುವ ಪ್ರಯತ್ನವೂ ನಡೆಯುತ್ತಿದೆ ಎನ್ನಲಾಗುತ್ತಿದೆ. ಆದರೆ ಈ ಕುರಿತು ಕಾಂಗ್ರೆಸ್ ಹೈಕಮಾಂಡ್ ಅಥವಾ ರಾಜ್ಯ ನಾಯಕರು ಅಧಿಕೃತವಾಗಿ ಯಾವುದೇ ಹೇಳಿಕೆ ನೀಡಿಲ್ಲ.

ರಾಜ್ಯ ರಾಜಕೀಯದಲ್ಲಿ ಮುಂದಿನ ಕೆಲವು ದಿನಗಳು ಮಹತ್ವದ ತಿರುವು ಪಡೆಯುವ ಸಾಧ್ಯತೆ ಇದ್ದು, ದೆಹಲಿ ಸಭೆಗಳ ನಂತರವೇ ಸ್ಪಷ್ಟ ಚಿತ್ರಣ ಹೊರಬೀಳುವ ನಿರೀಕ್ಷೆ ಇದೆ.

key words: Deputy CM D. K. Shivakumar, Home portfolio, D. K. Suresh, nominated, Rajya Sabha.

SUMMARY: 

Breaking News | Karnataka Politics

Speculation is rife within Congress circles that the party high command is working on a formula to ease the Chief Ministerial tussle in Karnataka. As part of the strategy, Deputy CM D. K. Shivakumar may reportedly be given the Home portfolio, while his brother D. K. Suresh could be nominated to the Rajya Sabha.

The buzz gained momentum after CM Siddaramaiah rushed to Delhi today, triggering fresh political speculation. Congress high command is said to be exploring a power-balancing formula to maintain unity within the state leadership.

However, no official confirmation has been issued by the Congress leadership so far.