ರಾಜ್ಯದ ಆರ್ಥಿಕ ಸ್ಥಿತಿಗತಿಗೆ ಸಂಬಂಧಿಸಿದಂತೆ ಶ್ವೇತಪತ್ರ ಹೊರಡಿಸಿ- ಸರ್ಕಾರಕ್ಕೆ ಮಾಜಿ ಶಾಸಕ ಸಿ.ಟಿ ರವಿ ಆಗ್ರಹ.

ನವದೆಹಲಿ,ಜೂನ್,2,2023(www.justkannada.in): ಕಾಂಗ್ರೆಸ್ ಘೋಷಣೆ ಮಾಡಿರುವ ಗ್ಯಾರಂಟಿ ಯೋಜನೆಗಳನ್ನ ಸ್ವಾಗತಿಸುವೆ. ಆದರೆ ರಾಜ್ಯದ ಆರ್ಥಿಕ ಸ್ಥಿತಿಗತಿಗೆ ಸಂಬಂಧಿಸಿದಂತೆ ಶ್ವೇತಪತ್ರ ಹೊರಡಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ  ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಆಗ್ರಹಿಸಿದ್ದಾರೆ.

ಇಂದು ನವದೆಹಲಿಯಲ್ಲಿ ಮಾತನಾಡಿದ ಮಾಜಿ ಶಾಸಕ ಸಿ.ಟಿ ರವಿ, ಕಾಂಗ್ರೆಸ್ ಚುನಾವಣಾ ಪೂರ್ವದಲ್ಲಿ ಕೊಟ್ಟ ಭರವಸೆ ಈಡೇರಿಸಿದ್ದಕ್ಕೆ ಸ್ವಾಗತ. ಯೋಜನೆಯನ್ನ ಸರಿಯಾಗಿ ಅನುಷ್ಠಾನಕ್ಕೆ ತರುವ ಕೆಲಸ ಆಗಲಿ. ಪ್ರಣಾಳಿಕೆಯಲ್ಲಿ  ಮುದ್ರಿಸಿರುವಂತೆ ಪ್ರತಿ ವ್ಯಕ್ತಿಗೆ ಎಂದಿದ್ರು.  ಈಗ ಘೋಷಣೆ ವೇಳೆ ಕುಟುಂಬಕ್ಕೆ ಅಂತಿದ್ದಾರೆ.  ರಾಜ್ಯದ ಆರ್ಥಿಕ ಸ್ಥಿತಿಗತಿಗೆ ಸಂಬಂಧಿಸಿದಂತೆ ಶ್ವೇತಪತ್ರ  ಹೊರಡಿಸಿ. ಖರ್ಚು  ವೆಚ್ಚ ಸೇರಿ ಯೋಜನೆಗೆ ಎಷ್ಟು ಹಣ ಖರ್ಚಾಗುತ್ತದೆ ಎಂಬ ಮಾಹಿತಿ ನೀಡಿ.

ಚಾಲ್ತಿಯಲ್ಲಿರುವ ಯೋಜನೆಗಳಿಗೆ ತಗಲುವ ವೆಚ್ಚದ ಬಗ್ಗೆ ಮಾಹಿತಿ ನೀಡಿ.  ರಾಜ್ಯದ ಜನ  ಆರ್ಥಿಕ ವೆಚ್ಚಕ್ಕೆ ಸಂಬಂಧಿಸಿದಂತೆ ಒಂದು ನಿಲುವಿಗ ಬರಬೇಕಿದೆ. ಶ್ರೀಲಂಕಾ,  ಪಾಕಿಸ್ತಾನ ನದಂತಹ ಪರಿಸ್ಥಿತಿಗೆ ಕರ್ನಾಟಕ ಬರಬಾರದು ಎಂದು ಸಿ.ಟಿ ರವಿ ಹೇಳಿದರು.

Key words: CT Ravi –demands- government – economic -condition – state.