5 ಗ್ಯಾರಂಟಿ ಯೋಜನೆ ಘೋಷಣೆ: ರಾಜ್ಯದ ಜನರನ್ನ ಯಾಮಾರಿಸುವ ಕೆಲಸ- ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಟೀಕೆ.

ಬೆಂಗಳೂರು,ಜೂನ್,2,2023(www.justkannada.in): ಐದು ಗ್ಯಾರಂಟಿ ಯೋಜನೆ ಜಾರಿಗೆ ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ಸೂಚಿಸಲಾಗಿದ್ದು, ಕಾಂಗ್ರೆಸ್ ಸರ್ಕಾರ ಜಾರಿಗೆ ಮುಂದಾಗಿರುವ ಈ  ಯೋಜನೆಗಳ ಕುರಿತು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಟೀಕಿಸಿದ್ದಾರೆ.

ಇಂದು ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ,  ಪ್ರತಿಮನೆಗೂ 200 ಯುನಿಟ್ ಉಚಿತ ವಿದ್ಯುತ್ ಎಂದು ಹೇಳಿದ್ದರು. ಆದರೆ   200 ಯೂನಿಟ್ ಒಳಗೆ ಬಳಸಿದ್ರೆ ಉಚಿತ. ಸರಾಸರಿ ಆಧಾರದಲ್ಲಿ ಉಚಿತ ವಿದ್ಯುತ್ ಎನ್ನುತ್ತಿದ್ದಾರೆ.  ೆಇದರ  ಅರ್ಥ ಉಚಿತ ವಿದ್ಯುತ್ ಕೊಡಲ್ಲ. ಕಾಂಗ್ರೆಸ್ ನಿಜಬಣ್ಣ ಬಯಲಾಗಿದೆ ಎಂದು ಕಿಡಿಕಾರಿದರು.

ಸಿಎಂರದ್ದು ಮೊದಲು ಒಂದು ಮಾತು ಈಗ ಒಂದು ಮಾತು . ಅನ್ನಭಾಗ್ಯ ಯೋಜನೆಯಲ್ಲಿ ಸ್ಪಷ್ಟತೆ ಇಲ್ಲ. 10 ಕೆಜಿ ಅಕ್ಕಿ ಕೊಡತ್ತೇವೆ ಎಂದಿದ್ದರು. ಈಗ ಆಹಾರ ಧಾನ್ಯ ಕೊಡುತ್ತೇವೆ ಎಂದಿದ್ದಾರೆ. ಕಾಂಗ್ರೆಸ್ ಸರ್ಕಾರ ರಾಜ್ಯದ ಜನರನ್ನ ಯಾಮಾರಿಸುವ ಕೆಲಸ ಮಾಡುತ್ತಿದೆ. ಕೇಂಧ್ರ  ಸರ್ಕಾರ 5 ಕೆ.ಜಿ ಕೊಡುತ್ತೆ ಕಾಂಗ್ರೆಸ್ ಸರ್ಕಾರ ಉಳಿದ 5 ಕೆಜಿ ಅಕ್ಕಿಕೊಡುತ್ತದೆ.  10 ಕೆಜಿಯಲ್ಲಿ ರಾಗಿ, ಜೋಳ ಸೇರಿದೆಯಾ ಹೆಚ್ಚುವರಿ ಕೊಡ್ತಾರಾ..? ಎಂದು ಬಸವರಾಜ ಬೊಮ್ಮಾಯಿ ಪ್ರಶ್ನಿಸಿದರು.

ಗೃಹಲಕ್ಷ್ಮಿ ಯೋಜನೆಯಲ್ಲೂ ಭಾರಿ ಮೋಸ ಮಾಡುತ್ತಿದ್ದಾರೆ.  ಗ್ಯಾರಂಟಿ ಯೋಜನೆಗಳ ಖರ್ಚು ವೆಚ್ಚದ ಬಗ್ಗೆ ಮಾಹಿತಿ ನೀಡಿಲ್ಲ. ಹಿಂದಿನ ಯೋಜನೆಗಳನ್ನ ನಿಲ್ಲಿಸ್ತಾರಾ..?  ಜಲ ಜೀವನ್ ಮಿಷನ್ ಯೋಜನೆಗೆ ನಾವು ಹಣ ಒದಗಿಸಿದ್ದವು. ರಾಜ್ಯದ ಜನರ ತೆರಿಗೆ ಹಣ  ಅಭಿವೃದ್ದಿ ಯೋಜನೆಗೆ ಖರ್ಚಾಗಲಿ. ಸರ್ಕಾರ ಆರ್ಥಿಕ ಶಿಸ್ತು ಕಾಪಾಡಿಕೊಳ್ಳಬೇಕು ಎಂದು ಬಸವರಾಜ ಬೊಮ್ಮಾಯಿ ಹೇಳಿದರು.

Key words: 5 Guarantee -Scheme -Announcement- Former CM- Basavaraja Bommai-criticize