ನಯನತಾರ-ಸಮಂತಾ ಜತೆ ತಮಿಳು ಸಿನಿಮಾದಲ್ಲಿ ಕ್ರಿಕೆಟರ್ ಶ್ರೀಶಾಂತ್

ಬೆಂಗಳೂರು, ಫೆಬ್ರವರಿ 10, 2022 (www.justkannada.in): ಮಾಜಿ ಕ್ರಿಕೆಟಿಗ ಶ್ರೀಶಾಂತ್ ಮತ್ತೆ ಬಿಗ್ ಸ್ಕ್ರೀನ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಹೌದು. ಬಹುನಿರೀಕ್ಷಿತ ತಮಿಳು ಸಿನಿಮಾದಲ್ಲಿ ಕ್ರಿಕೆಟರ್​ ಶ್ರೀಶಾಂತ್​ ಮತ್ತೆ ಬಣ್ಣ ಹಚ್ಚಿದ್ದಾರೆ.

ಕ್ರಿಕೆಟ್​ನಿಂದ ದೂರವಾದ ನಂತರ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಶ್ರೀಶಾಂತ್​ ಈ ಬಾರಿ, ನಯನತಾರ ಮತ್ತು ಸಮಂತಾ ಜೊತೆ ಕಾಣಿಸಿಕೊಳ್ತಿದ್ದಾರೆ.

ಸ್ಟಾರ್ ನಟಿಯರಾದ ನಯನತಾರ ಮತ್ತು ಸಮಂತಾ ಜತೆ ಶ್ರೀಶಾಂತ್ ತೆರೆ ಮೇಲೆ ಕಾಣಿಸಿಕೊಳ್ಳುತ್ತಿರುವ ವಿಷಯ ಅಭಿಮಾನಿಗಳಲ್ಲೂ ಕುತೂಹಲ ಮೂಡಿಸಿದೆ.