ವಿಶ್ವಕಪ್ ಕ್ರಿಕೆಟ್: ಲಕ್ನೊದಲ್ಲಿಂದು ಭಾರತ-ಇಂಗ್ಲೆಂಡ್ ಫೈಟ್

ಬೆಂಗಳೂರು, ಅಕ್ಟೋಬರ್ 29, 2023 (www.justkannada.in): ಲಕ್ನೊದ ಭಾರತ ರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿ ಏಕಾನ ಸ್ಟೇಡಿಯಮ್‌ನಲ್ಲಿ ನಡೆಯುವ ವಿಶ್ವಕಪ್‌ ಕ್ರಿಕೆಟ್ ಪಂದ್ಯಾವಳಿಯಲ್ಲಿ ಇಂದು ಟೀಂ ಇಂಡಿಯಾ ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ.

ಭಾರತವು ಈವರೆಗೆ ತಾನು ಆಡಿರುವ ಎಲ್ಲಾ ಐದು ಲೀಗ್ ಪಂದ್ಯಗಳನ್ನು ಗೆದ್ದು ಅಂಕಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದೆ. ಹಾಲಿ ಚಾಂಪಿಯನ್ ಇಂಗ್ಲೆಂಡ್ ಐದು ಪಂದ್ಯಗಳಲ್ಲಿ ಕೇವಲ ಒಂದರಲ್ಲಿ ಗೆದ್ದಿದೆ.

ರೋಹಿತ್ ಶರ್ಮಾ ನೇತೃತ್ವದ ತಂಡವು ಈವರೆಗೆ ಸರಿಯಾದ ಹೆಜ್ಜೆಗಳನ್ನೇ ಇಟ್ಟಿದೆ. ಈವರೆಗೆ ಆಡಿರುವ ಎಲ್ಲಾ ಐದು ಪಂದ್ಯಗಳಲ್ಲಿ ಎರಡನೆಯದಾಗಿ ಬ್ಯಾಟ್ ಗುರಿಯನ್ನು ಯಶಸ್ವಿಯಾಗಿ ಬೆನ್ನತ್ತಿದೆ.

ಹಾಲಿ ಚಾಂಪಿಯನ್ ಈಗ ಪಂದ್ಯಾವಳಿಯಿಂದ ಹೊರಬೀಳುವ ಹೊಸ್ತಿಲಲ್ಲಿದೆ. ಕೊನೆಯ ಪಂದ್ಯಗಳಲ್ಲಿಯಾದರೂ ಗೆದ್ದು ಅಂಕಪಟ್ಟಿಯಲ್ಲಿ ಸ್ಥಾನ ಉತ್ತಮ ಪಡಿಸಿಕೊಳ್ಳಲು ಇಂಗ್ಲೆಂಡ್ ಹೋರಾಟ ನಡೆಸಬೇಕಿದೆ.