ಗೋ ಮಾಂಸ ಸೇವನೆ ಬಗ್ಗೆ ಹೇಳಿಕೆ ವಿಚಾರ -ಸಿದ್ಧರಾಮಯ್ಯ ವಿರುದ್ಧ ಸಿಎಂ ಬಿ.ಎಸ್. ವೈ ವಾಗ್ದಾಳಿ…

ಮೈಸೂರು,ಜನವರಿ,11,2021(www.justkannada.in) : ಗೋ ಮಾಂಸ ತಿನ್ನುವುದೇ ದೊಡ್ಡ ಸಾಧನೆ ಅಂತಾ ಮೈಸೂರಿನ ಕಾಂಗ್ರೆಸ್ ಮುಖಂಡ ಹೇಳುತ್ತಾನೆ. ಅಂತಹವರ ಬಗ್ಗೆ ಮಾತನಾಡೋದು‌ ನಮಗೆ ಶೋಭೆ ತರೋಲ್ಲ ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.jk-logo-justkannada-mysore

ಮೈಸೂರಿನಲ್ಲಿ ನಡೆದ ಜನಸೇವಕ ಸಮಾರಂಭದಲ್ಲಿ ಸಿದ್ದು ವಿರುದ್ದ ವಾಗ್ದಾಳಿ ನಡೆಸಿದ ಸಿಎಂ ಬಿಎಸ್‌ವೈ. ನಮ್ಮನ್ನು ಕೆಣಕಲು ಬೇಕಾಬಿಟ್ಟಿ ಹೇಳಿಕೆ ನೀಡುತ್ತಾರೆ. ಪದೆಪದೇ ಟೀಕೆ ಮಾಡುತ್ತಾರೆ. ಅದಕ್ಕೆ ಮಾಧ್ಯಮದವರು ನಮ್ಮಿಂದ ಪ್ರತಿಕ್ರಿಯೆ ನಿರೀಕ್ಷೆ ಮಾಡುತ್ತಾರೆ. ನಾವು ಮಾಧ್ಯಮದವರಿಗೆ ಉತ್ತರ ಕೊಡುವ ಅಗತ್ಯವಿಲ್ಲ. ಕೆಲಸ ಮಾಡಿ ಉತ್ತರ ಕೊಡಬೇಕು. ಜನರಿಗೆ ಉತ್ತರ ಕೊಡೋಣ ಎಂದು ಹೇಳಿದರು.

ಕಾಂಗ್ರೆಸ್ ಎಲ್ಲಿದೆ? ಅವರ ಬಗ್ಗೆ ನಾವೇಕೆ ಮಾತಾಡಬೇಕು?

cow Meat-eat-Great achievement-Talking-Not quite-CM B.S.Yeddyurappa

ಕಾಂಗ್ರೆಸ್ ಎಲ್ಲಿದೆ? ಅವರ ಬಗ್ಗೆ ನಾವೇಕೆ ಮಾತಾಡಬೇಕು. ಕೇಂದ್ರದಲ್ಲಿ ನಾಯಕತ್ವ ಇದೆಯಾ?, ರಾಜ್ಯದಲ್ಲಿ ನಾಯಕತ್ವ ಇದೆಯಾ.?, ಅವರ ಬಗ್ಗೆ ನಾನು ಮಾತನಾಡುವುದೆ ಇಲ್ಲ ಎಂದು ತಿಳಿಸಿದರು.

key words : cow Meat-eat-Great achievement-Talking-Not quite-
CM B.S.Yeddyurappa