ಪರಸ್ಪರ ಹಾಡಿ ಹೊಗಳಿದ  ಸಿಎಂ ಬಿಎಸ್ ವೈ – ನಳೀನ್ ಕುಮಾರ್ ಕಟೀಲ್…

ಮೈಸೂರು,ಜನವರಿ,11,2021(www.justkannada.in):   ದೆಹಲಿಗೆ ತೆರೆಳಿ ಸಚಿವ ಸಂಪುಟ ವಿಸ್ತರಣೆ ಸಂಬಂಧ ಪಕ್ಷದ ವರಿಷ್ಠರ ಜತೆ ಮಾತನಾಡಿ ಸಂಪುಟ ವಿಸ್ತರಣೆಗೆ ಗ್ರೀನ್ ಸಿಗ್ನಲ್ ಪಡೆದು ವಾಪಸ್ ಆಗಿರುವ  ಸಿಎಂ ಬಿಎಸ್ ಯಡಿಯೂರಪ್ಪ ಅವರನ್ನ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹಾಡಿ ಹೊಗಳಿದ್ಧಾರೆ.jk-logo-justkannada-mysore

ಇತ್ತ ಸಿಎಂ ಬಿಎಸ್ ಯಡಿಯೂರಪ್ಪ ಸಹ ನಳೀನ್ ಕುಮಾರ್ ಕಟೀಲ್ ಅವರ ಬಗ್ಗೆ ಮೆಚ್ಚುಗೆ ಮಾತುಗಳನ್ನಾಡಿದ್ದಾರೆ. ಹೌದು ಮೈಸೂರಿನಲ್ಲಿ ಜನಸೇವಕ ಕಾರ್ಯಕ್ರಮದಲ್ಲಿ ಸಿಎಂ ಬಿ.ಎಸ್.ಯಡಿಯೂರಪ್ಪ- ನಳೀನ್ ಕುಮಾರ್ ಕಟೀಲ್ ಪರಸ್ಪರ ಹಾಡಿ ಹೊಗಳಿದ್ದಾರೆ.

cm-bs-yeddyurappa-naleen-kumar-kateel-praises-each-other
ಕೃಪೆ-internet

ಕಾರ್ಯಕ್ರಮದಲ್ಲಿ ಮಾತನಾಡಿದ ನಳೀನ್ ಕುಮಾರ್ ಕಟೀಲ್,  ಸಂಘಟನೆಗಾಗಿ ಜೀವಮಾನ ಪೂರ್ತಿ ದುಡಿದ ಯಡಿಯೂರಪ್ಪ ನಮಗೆ ಆದರ್ಶಪ್ರಾಯ ಎಂದರು. ಹಾಗೆಯೇ ಗ್ರಾಮ ಪಂಚಾಯಿತಿ ಚುನಾವಣೆ ಯಶಸ್ಸಿಗೆ ರಾಜ್ಯಾದ್ಯಂತ ಪ್ರವಾಸ ಮಾಡಿದ ಕಟೀಲ್ ನಮಗೆ ಆದರ್ಶಪ್ರಾಯ ಎಂದು ಸಿಎಂ ಬಿಎಸ್ ಯಡಿಯೂರಪ್ಪ ಗುಣಗಾನ ಮಾಡಿದರು. ಈ ಮೂಲಕ ಉಭಯ ನಾಯಕರು ಪರಸ್ಪರ ಮೆಚ್ಚುಗೆಯ ಮಾತನಾಡಿಕೊಂಡರು.

Key words: CM BS yeddyurappa- Naleen Kumar Kateel-praises –  each other