Sunday, September 20, 2026

BDA Apartments

ಕರ್ನಾಟಕದಲ್ಲಿ ಇಳಿದ ಕೋವಿಡ್ ಪಾಸಿಟಿವಿಟಿ ದರ BDA JK_Adv BDA Adv
Home Front Page ಕರ್ನಾಟಕದಲ್ಲಿ ಇಳಿದ ಕೋವಿಡ್ ಪಾಸಿಟಿವಿಟಿ ದರ

ಕರ್ನಾಟಕದಲ್ಲಿ ಇಳಿದ ಕೋವಿಡ್ ಪಾಸಿಟಿವಿಟಿ ದರ

ಬೆಂಗಳೂರು, ಜನವರಿ 30, 2022 (www.justkannada.in): ರಾಜ್ಯದಲ್ಲಿ ಕೋವಿಡ್ ಸೋಂಕಿನ ಪ್ರಮಾಣ ಇಳಿಕೆಯಾಗಿದೆ. ಆ ಮೂಲಕ ರಾಜ್ಯದ ಒಟ್ಟು ಸೋಂಕಿನ ಪಾಸಿಟಿವಿಟಿ ದರ ಶೇ.19.37ಗೆ ಇಳಿಕೆಯಾಗಿದೆ.

ಶನಿವಾರ 33,337 ಮಂದಿ ಕೊರೊನಾ ಸೋಂಕಿಗೆ ತುತ್ತಾಗಿದ್ದು, ವಿವಿಧ ಜಿಲ್ಲೆಯಲ್ಲಿ 69,902ಮಂದಿ ಗುಣಮುಖರಾಗಿದ್ದಾರೆ. ಶನಿವಾರ 1.72ಲಕ್ಷ ಮಂದಿಯನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ. ರಾಜ್ಯಾದ್ಯಂತ ಒಟ್ಟು 2.52ಲಕ್ಷ ಸಕ್ರಿಯ ಪ್ರಕರಣಗಳಿವೆ.

ಅನಾರೋಗ್ಯದಿಂದ ಬಳಲುತ್ತಿದ್ದ ಕೋವಿಡ್ ಸೋಂಕಿತ 70 ಮಂದಿ ಮೃತಪಟ್ಟಿದ್ದು, ಮರಣ ಪ್ರಮಾಣ ಶೇ. 0.20ರಷ್ಟಿದೆ.

ಬೆಂಗಳೂರು ನಗರ 16586, ಮೈಸೂರು 2431,ಧಾರವಾಡ 1278, ತುಮಕೂರು 1192, ಹಾಸನ 1039, ಮಂಡ್ಯ 986, ಬೆಳಗಾವಿ 798, ಶಿವಮೊಗ್ಗ 674, ಉತ್ತರ ಕನ್ನಡ 665, ದಕ್ಷಿಣ ಕನ್ನಡ 627,ಬಳ್ಳಾರಿ 602, ಉಡುಪಿ 579, ಕಲಬುರಗಿ 577, ಚಾಮರಾಜನಗರ 573, ಕೋಲಾರ 567, ಕೊಡಗು 540, ಹಾವೇರಿ 460, ಬಾಗಲಕೋಟೆ 394, ಬೆಂಗಳೂರು ಗ್ರಾಮಾಂತರ 367,ಚಿತ್ರದುರ್ಗ 309, ಚಿಕ್ಕಬಳ್ಳಾಪುರ 307, ಚಿಕ್ಕಮಗಳೂರು 292, ಕೊಪ್ಪಳ 269, ರಾಮನಗರ 237, ದಾವಣಗೆರೆ 216, ಬೀದರ್ 209, ಗದಗ 171, ವಿಜಯಪುರ 139, ರಾಯಚೂರು 137, ಯಾದಗಿರಿ ಜಿಲ್ಲೆಯ 116 ಮಂದಿ ಸೋಂಕಿಗೆ ತುತ್ತಾಗಿದ್ದಾರೆ.