ದೇಶದಲ್ಲಿ ಸತತ ನಾಲ್ಕನೇ ದಿನವೂ 40 ಸಾವಿರ ಗಡಿ ದಾಟಿದ ಕೋವಿಡ್ ಪಾಸಿಟಿವ್ ಪ್ರಕರಣ.

ನವದೆಹಲಿ,ಜುಲೈ,31,2021(www.justkannada.in):  ದೇಶದಲ್ಲಿ ಕೊರೋನಾ 2ನೇ ಅಲೆ ತಗ್ಗುತ್ತಿದ್ದಂತೆಯೇ 3ನೇ ಅಲೆಯ ಭೀತಿ ಎದುರಾಗಿದ್ದು ಈ ಮಧ್ಯೆ ಸತತ ನಾಲ್ಕನೇ ದಿನವೂ ಹೊಸ  ಕೊರೊನಾ ಸೋಂಕಿನ ಪ್ರಕರಣ  40 ಸಾವಿರ ಗಡಿ ದಾಟಿದೆ.

ಹೌದು,  ದೇಶದಲ್ಲಿ ಕಳೆದ 24ಗಂಟೆಗಳಲ್ಲಿ ಹೊಸದಾಗಿ 41,649 ಕೋವಿಡ್ 19 ಪ್ರಕರಣಗಳು ಪತ್ತೆಯಾಗಿದೆ. ಈ ಕುರಿತು ಮಾಹಿತಿ ನೀಡಿರುವ ಕೇಂದ್ರ ಆರೋಗ್ಯ ಸಚಿವಾಲಯ, ದೇಶದಲ್ಲಿ ಕಳೆದ 24ಗಂಟೆಗಳಲ್ಲಿ 41,649 ಕೋವಿಡ್ 19 ಪ್ರಕರಣಗಳು ಪತ್ತೆಯಾಗಿದೆ. ಕೊರೋನಾದಿಂದ ಒಂದೇ ದಿನದಲ್ಲಿ  593 ಮಂದಿ  ಮೃತಪಟ್ಟಿದ್ದಾರೆ. 37,291 ಜನರು ಕೋವಿಡ್ ನಿಂದ ಚೇತರಿಸಿಕೊಂಡಿದ್ದಾರೆ. ದೇಶದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಒಟ್ಟು 3,16,13,993ಕ್ಕೆ ಏರಿಕೆಯಾದರೇ ಕೋವಿಡ್ ನಿಂದ ಸಾವನ್ನಪ್ಪಿರುವವರ ಸಂಖ್ಯೆ 4,23,810ಕ್ಕೆ ಹೆಚ್ಚಳವಾಗಿದೆ.

ದೇಶದಲ್ಲೀಗ ಸಕ್ರಿಯ ಕೋವಿಡ್ ಪ್ರಕರಣಗಳ ಸಂಖ್ಯೆ 4,08,920ಕ್ಕೆ ಏರಿಕೆಯಾಗಿದೆ.  ಜುಲೈ 27ರಂದು ಭಾರತದಲ್ಲಿ 30,000ಕ್ಕಿಂತ ಕಡಿಮೆ ಕೋವಿಡ್ ಪ್ರಕರಣಗಳು ವರದಿಯಾಗಿತ್ತು. ನಂತರ ಜುಲೈ 28ರಂದು 43,654 ಪ್ರಕರಣ ಪತ್ತೆಯಾಗಿತ್ತು. ನಂತರ ಜುಲೈ 29ರಂದು 43,509 ಪ್ರಕರಣ, ಜುಲೈ 30ರಂದು 44,230 ಪ್ರಕರಣ ಪತ್ತೆಯಾಗಿತ್ತು. ಇದೀಗ ಕಳೆದ 24 ಗಂಟೆಗಳಲ್ಲಿ ಹೊಸದಾಗಿ 40 ಸಾವಿರಕ್ಕೂ ಹೆಚ್ಚು ಕೊರೋನಾ ಪ್ರಕರಣಗಳು ಪತ್ತೆಯಾಗಿರುವುದು ಸಾಕಷ್ಟು ಆತಂಕವನ್ನುಂಟು ಮಾಡಿದೆ.

ENGLISH SUMMARY…

COVID cases cross 40k in the country for the 4th consecutive day
New Delhi, July 31, 2021 (www.justkannada.in): The fear of COVID third wave has started in the country, as the number of new cases registered cross 40 k for the fourth consecutive day.
41,649 new cases have been registered in the country in the last 24 hours. According to the information provided by the Union Health Ministry 593 people have lost their lives in the last 24 hours and 37,291 people have recovered. The number of total COVID cases has increased to 3,16,13,993 and the total number of deaths has increased to 4,23,810.
The number of active cases has increased to 4,08,920. On July 27 the country had registered lesser than 30,000 cases, which increased to 43,654 on July 28 and 43,509 on July 29. Yesterday that is on July 30 44,230 cases have been identified triggering an alarm.
Keywords: COVID-19/ Coronavirus/ increase/ above 40,000

Key words: Covid positive- case- crossing- 40,000 -borders – fourth consecutive- day.