ಕೋವಿಡ್ ನಿಂದ ಮೃತಪಟ್ಟ ಪತ್ರಕರ್ತ ಪವನ್ ಹೆತ್ತೂರು ಅವರ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ಮಂಜೂರು…

ಬೆಂಗಳೂರು,ನವೆಂಬರ್,10,2020(www.justkannada.in): ಇತ್ತೀಚೆಗಷ್ಟೇ ಕೊರೋನಾಗೆ ತುತ್ತಾಗಿ ಮೃತಪಟ್ಟ ಪ್ರಜಾವಾಣಿ ಮೈಸೂರು ಬ್ಯೂರೊ ವರದಿಗಾರ ಪವನ್ ಹೆತ್ತೂರು ಅವರ ಕುಟುಂಬಕ್ಕೆ ಸಿಎಂ ಬಿಎಸ್ ಯಡಿಯೂರಪ್ಪ 5 ಲಕ್ಷ ರೂ ಪರಿಹಾರವನ್ನು ಮಂಜೂರು ಮಾಡಿದ್ದಾರೆ.

ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ಮನವಿ ಮೇರೆಗೆ ಮೃತ ಪತ್ರಕರ್ತ ಪವನ್ ಹೆತ್ತೂರು (ವಿಜಯವಾಣಿ ಪತ್ರಿಕೆ ಮತ್ತು ಹಾಸನದ ಸ್ಥಳೀಯ ಪತ್ರಿಕೆಯಲ್ಲಿ ಸೇವೆ ಸಲ್ಲಿಸಿದ್ದರು)covid- journalist - Pawan Hettur-family- Rs 5 lakh- Relief- granted-cm bs yeddyurappa

ಅವರ ಕುಟುಂಬಕ್ಕೆ 5 ಲಕ್ಷ ರೂ ಪರಿಹಾರವನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮಂಜೂರು ಮಾಡಿದ್ದಾರೆ.

ಮನವಿಗೆ ಸ್ಪಂದಿಸಿ ಪರಿಹಾರ ಮಂಜೂರು ಮಾಡಿದ ಸಿಎಂ ಯಡಿಯೂರಪ್ಪ ಅವರಿಗೆ ಕೆಯುಡಬ್ಲ್ಯೂಜೆ ಅಧ್ಯಕ್ಷ ಶಿವಾನಂದ ತಗಡೂರು ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ.

Key words: covid- journalist – Pawan Hettur-family- Rs 5 lakh- Relief- granted-cm bs yeddyurappa