Wednesday, August 12, 2026

BDA Apartments

Home Front Page ಕೋವಿಡ್ ಹೆಚ್ಚಳ: ರಾಜ್ಯವ್ಯಾಪಿ ಶಾಲೆಗಳನ್ನ ಬಂದ್ ಮಾಡಲ್ಲ- ಶಿಕ್ಷಣ ಸಚಿವ ಬಿ.ಸಿ ನಾಗೇಶ್.

ಕೋವಿಡ್ ಹೆಚ್ಚಳ: ರಾಜ್ಯವ್ಯಾಪಿ ಶಾಲೆಗಳನ್ನ ಬಂದ್ ಮಾಡಲ್ಲ- ಶಿಕ್ಷಣ ಸಚಿವ ಬಿ.ಸಿ ನಾಗೇಶ್.

ಬೆಂಗಳೂರು,ಜನವರಿ,11,2022(www.justkannada.in): ರಾಜ್ಯದಲ್ಲಿ ಕೋವಿಡ್ ಸೋಂಕಿನ ಪ್ರಮಾಣ ಹೆಚ್ಚುತ್ತಿದ್ದು ಈ ನಡುವೆ ರಾಜ್ಯವ್ಯಾಪಿ ಶಾಲೆಗಳನ್ನ ಬಂದ್ ಮಾಡಲ್ಲ ಎಂದು ಪ್ರಾಥಮಿಕ ಶಿಕ್ಷಣ ಸಚಿವ ಬಿ.ಸಿ ನಾಗೇಶ್  ಸ್ಪಷ್ಟನೆ ನೀಡಿದ್ದಾರೆ.

ಈ ಕುರಿತು ಇಂದು ಮಾಧ್ಯಮಗಳ ಜತೆ ಮಾತನಾಡಿದ ಸಚಿವ ಬಿ.ಸಿ ನಾಗೇಶ್, ಬೆಂಗಳೂರು ನಗರದಲ್ಲಿ ಕೋವಿಡ್ ಪಾಸಿಟಿವಿಟಿ ದರ ಹೆಚ್ಚಿದೆ. ಹೀಗಾಗಿ ಶಾಲೆ ರಜೆ ಮುಂದುವರಿಕೆ ಬಗ್ಗೆ ಶೀಘ್ರವೇ ನಿರ್ಧಾರ ಮಾಡುತ್ತೇವೆ. ಆದರೆ ರಾಜ್ಯವ್ಯಾಪಿ ಶಾಲೆ ಬಂದ್ ಮಾಡಲ್ಲ. ಪಾಸಿಟಿವಿಟಿ ದರ ಹೆಚ್ಚಿರುವ ಕಡೆಗಳಲ್ಲಿ  ಭೌತಿಕ ತರಗತಿ ಬಂದ್ ಮಾಡುತ್ತೇವೆ ಎಂದು ತಿಳಿಸಿದರು.

ತಾಲ್ಲೂಕು ಮಟ್ಟದಲ್ಲೆ ಪಾಸಿಟಿವಿಟಿ ದರ ಹೆಚ್ಚಾದರೆ ಶಾಲೆ ರಜೆ ಬಗ್ಗೆ ಅಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು ನಿರ್ಧಾರ ಮಾಡುತ್ತಾರೆ ಎಂದು ಸಚಿವ ಬಿ.ಸಿ ನಾಗೇಶ್ ತಿಳಿಸಿದರು.

Key words: Covid-Increase- -schools-bandh-Minister -BC Nagesh.