Wednesday, July 29, 2026

BDA Apartments

Home Front Page ಕೋವಿಡ್ ನಿಂದ ಮೃತಪಟ್ಟ ಕುಟುಂಬಸ್ಥರಿಗೆ ಸಚಿವ ಎಸ್ ಟಿ ಸೋಮಶೇಖರ್ ರಿಂದ ತಲಾ 1 ಲಕ್ಷ...

ಕೋವಿಡ್ ನಿಂದ ಮೃತಪಟ್ಟ ಕುಟುಂಬಸ್ಥರಿಗೆ ಸಚಿವ ಎಸ್ ಟಿ ಸೋಮಶೇಖರ್ ರಿಂದ ತಲಾ 1 ಲಕ್ಷ ರೂ. ಪರಿಹಾರ…

ಬೆಂಗಳೂರು,ಮೇ,8,2021(www.justkannada.in): ತಮ್ಮ ಯಶವಂತಪುರ ವಿಧಾನಸಭಾ ಕ್ಷೇತ್ರದಲ್ಲಿ ಕೋವಿಡ್-19 ನಿಂದ‌ ಮೃತಪಟ್ಟ ಕುಟುಂಬಗಳಿಗೆ ಸಹಕಾರ ಸಚಿವ ಸಚಿವ ಎಸ್.ಟಿ.‌ ಸೋಮಶೇಖರ್  ತಲಾ ಒಂದು ಲಕ್ಷ ರೂ ಪರಿಹಾರ ಸಹಾಯಧನ ನೀಡುತ್ತಿದ್ದಾರೆ.jk

ಯಶವಂತಪುರ ವಿಧಾನಸಭಾ ಕ್ಷೇತ್ರದ ಪ್ರತಿಯೊಂದು ವಾರ್ಡ್ ಹಾಗೂ ಪಂಚಾಯಿತಿ ವ್ಯಾಪ್ತಿಯ ಜನರಿಗೆ ವೈಯುಕ್ತಿಕವಾಗಿ ಸಚಿವ ಎಸ್.ಟಿ.ಸೋಮಶೇಖರ್ ಪರಿಹಾರ ನೀಡುತ್ತಿದ್ದಾರೆ. ಇಂದಿನಿಂದ ನಿತ್ಯ ಒಂದೊಂದು ವಾರ್ಡ್ ನ ಸೋಂಕಿನಿಂದ ಮೃತಪಟ್ಟ ಕುಟುಂಬಸ್ಥರಿಗೆ ತಲಾ 1 ಲಕ್ಷ ನಗದು ವಿತರಣೆ ಮಾಡಲಾಗುತ್ತಿದ್ದು  ಸಹಾಯ ಧನ ವಿತರಣಾ ಕಾರ್ಯಕ್ರಮಕ್ಕೆ ಆದಿಚುಂಚನಗಿರಿ ಪೀಠಾಧ್ಯಕ್ಷರಾದ ನಿರ್ಮಲಾನಂದ ಸ್ವಾಮೀಜಿ ಚಾಲನೆ ನೀಡಿದರು.covid-death-families-rs-1-lakh-minister-st-somashekhar

ಇಂದು ಕೆಂಗೇರಿ  ವಾರ್ಡ್ 159 ರಲ್ಲಿ 27  ಕುಟುಂಬಗಳಿಗೆ ತಲಾ ಒಂದು ಲಕ್ಷ ನಗದು ಹಣವನ್ನು ವಿತರಣೆ ಮಾಡಲಾಯಿತು. ನಾಳೆಯಿಂದ ಸಚಿವ ಎಸ್.ಟಿ‌. ಸೋಮಶೇಖರ್ ನೇತೃತ್ವದಲ್ಲಿ  17 ಪಂಚಾಯಿತಿ ವ್ಯಾಪ್ತಿ ಹಾಗೂ 5  ವಾರ್ಡ್‌ನ ಜನರಿಗೆ ಸಹಾಯ ಧನ ವಿತರಣೆ ಮಾಡಲಿದ್ದಾರೆ.

Key words: covid –death- families -Rs 1 lakh – Minister- ST Somashekhar