ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಡಾ.ಪುಷ್ಪ ಅಮರನಾಥ್ ಗೆ ಕೋವಿಡ್ ಸೋಂಕು ದೃಢ…

ಮೈಸೂರು,ಏಪ್ರಿಲ್,1,2021(www.justkannada.in):  ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಡಾ. ಪುಷ್ಪಅಮರನಾಥ್ ಗೆ ಕೋವಿಡ್ ಸೋಂಕು ದೃಢಪಟ್ಟಿದೆ.Illegally,Sand,carrying,Truck,Seized,arrest,driver

ಕಳೆದ  ಹಲವು ದಿನಗಳಿಂದ ರಾಜ್ಯ ವ್ಯಾಪ್ತಿ ಡಾ. ಪುಷ್ಪಅಮರನಾಥ್ ಸಂಚಾರಿಸಿದ್ದರು. ರಾಜ್ಯದ ಉಪಚುನಾವಣೆಗಳಲ್ಲಿ ತೊಡಗಿದ್ದ ಪುಷ್ಪ ಅಮರನಾಥ್ ಅವರಿಗೆ ಬೆಳಗಾವಿ ಉಪಚುನಾವಣೆಯ  ಪ್ರಚಾರದಲ್ಲಿ ತೊಡಗಿದ್ದ ವೇಳೆ ಅನಾರೋಗ್ಯ ಉಂಟಾಗಿತ್ತು. ಬಳಿಕ ಅವರು ಆಸ್ಪತ್ರೆಗೆ ದಾಖಲಾಗಿದ್ದರು.covid-confirmed-kpcc-womens-unit-chairperson-dr-pushpa-amarnath

ಇದೀಗ ಆಸ್ಪತ್ರೆಗೆ ದಾಖಲಾದ ಬಳಿಕ ಡಾ.ಪುಷ್ಪ ಅಮರನಾಥ್ ಅವರಿಗೆ ಕೋವಿಡ್ 19 ಪಾಸಿಟಿವ್ ದೃಢವಾಗಿದೆ. ಈ ಬಗ್ಗೆ ಸ್ವತಃ ಪುಷ್ಪ ಅಮರನಾಥ್ ಟ್ವಿಟ್ಟರ್ ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಮುಂಜಾಗ್ರತೆಯ ದೃಷ್ಟಿಯಿಂದ ನಾನು ಸಮೀಪದ ಆಸ್ಪತ್ರೆಗೆ ದಾಖಲಾಗಿದ್ದೇನೆ. ನನ್ನ ಸಂಪರ್ಕಕ್ಕೆ ಬಂದವರು ಕೂಡಲೇ ಕೋವಿಡ್ ಪರೀಕ್ಷಿಸಿಕೊಳ್ಳಿ ಎಂದು ಪುಷ್ಪ ಅಮರನಾಥ್ ಮನವಿ ಮಾಡಿದ್ದಾರೆ.

Key words: covid- confirmed -KPCC Women’s Unit – Chairperson –  Dr Pushpa Amarnath