ಬಾವಿಗೆ ಬಿದ್ದು ದಂಪತಿಗಳಿಬ್ಬರು ಸಾವು

ಮಂಡ್ಯ,ಸೆಪ್ಟಂಬರ್ 5,2025 (www.justkannada.in): ಎಮ್ಮೆ ತೊಳೆಯುವಾಗ ಬಾವಿಗೆ ಬಿದ್ದು ದಂಪತಿ ಸಾವನ್ನಪ್ಪಿರುವ ಘಟನೆ ಮಂಡ್ಯ ಜಿಲ್ಲೆ ಕೆಆರ್ ಪೇಟೆ ತಾಲ್ಲೂಕಿನ ಅರೆಬೊಪ್ಪನಹಳ್ಳಿಯಲ್ಲಿ ನಡೆದಿದೆ.

ಅರೆಬೊಪ್ಪನಹಳ್ಳಿ ಗ್ರಾಮದ ಕಾಳೇಗೌಡ(70), ವಸಂತಮ್ಮ(65) ಮೃತಪಟ್ಟವರು. ಎಮ್ಮೆ ತೊಳೆಯಲು ಹೋಗಿದ್ದ ವೇಳೆ ತೆರೆದ ಬಾವಿಗೆ ಬಿದ್ದ ಪತ್ನಿ ವಸಂತಮ್ಮರನ್ನ ರಕ್ಷಿಸಲು ಹೋದ ಪತಿ ಕಾಳೇಗೌಡ ಕೂಡ ಬಾವಿಯಲ್ಲಿ ಬಿದ್ದು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.

ಕೆ.ಆರ್.ಪೇಟೆ ಟೌನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

Key words: Couple, dies ,after, falling, well, Mandya