ನೇಣು ಬಿಗಿದುಕೊಂಡು ದಂಪತಿಗಳಿಬ್ಬರು ಆತ್ಮಹತ್ಯೆಗೆ ಶರಣು.

ಬಳ್ಳಾರಿ,ಫೆಬ್ರವರಿ,25,2022(www.justkannada.in):  ನೇಣುಬಿಗಿದುಕೊಂಡು ದಂಪತಿಗಳಿಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬಳ್ಳಾರಿಯ ಚಳ್ಳಕುರ್ಕಿ ಬಳಿ ನಡೆದಿದೆ.

ರಾಮಯ್ಯ, ಜಯಮ್ಮ  ಆತ್ಮಹತ್ಯೆಗೆ ಶರಣಾದ ದಂಪತಿ. ಚಳ್ಳಕುರ್ಕಿ ಬಳಿಯ ಜಮೀನಿನ ತೋಟದ ಮನೆಯ ಕಿಟಕಿಗೆ ದಂಪತಿಗಳಿಬ್ಬರು ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದು ಕಾರಣ ತಿಳಿದು ಬಂದಿಲ್ಲ.

ಘಟನಾ ಸ್ಥಳಕ್ಕೆ ಪಿಡಿಹಳ್ಳಿ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಈ ಕುರಿತು ಪಿಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Key words: Couple-commit-suicide -hanging