ಜಂಬೂ ಸವಾರಿಗೆ ಕ್ಷಣಗಣನೆ: ಕ್ಯಾಪ್ಟನ್ ಅಭಿಮನ್ಯು ಅಂಡ್ ಟೀಂ ಸಜ್ಜು: ಸಿದ್ಧತೆ ಬಗ್ಗೆ ಮಾಹಿತಿ ನೀಡಿದ ಡಿಸಿಎಫ್ ಕರಿಕಾಳನ್.

ಮೈಸೂರು,ಅಕ್ಟೋಬರ್.15,2021(www.justkannada.in):  ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಐತಿಹಾಸಿಕ ದಸರಾ ಜಂಬೂ ಸವಾರಿ ಮೆರವಣಿಗೆಗೆ ಕ್ಷಣಗಣನೆ ಆರಂಭವಾಗಿದ್ದು ಚಿನ್ನದ ಅಂಬಾರಿ ಹೊರಲು ಕ್ಯಾಪ್ಟನ್ ಅಭಿಮನ್ಯು ಸಜ್ಜಾಗಿದ್ದಾನೆ.

ದಸರಾ ಜಂಬೂ ಸವಾರಿ ಮೆರವಣಿಗೆ ಸಿದ್ಧತೆ ಬಗ್ಗೆ ಮಾಹಿತಿ ನೀಡಿದ ಡಿಸಿಎಫ್ ಕರಿಕಾಳನ್, ಅಭಿಮನ್ಯು ಅಂಡ್ ಟೀಂ ಜಂಬೂ ಸವಾರಿ ಮೆರೆವಣಿಗೆ ಸಜ್ಜಾಗಿವೆ. ಈ ಬಾರಿ ಯಶಸ್ವಿಯಾಗಿ ಮೆರವಣಿಗೆ ನಡೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮೆರವಣಿಗೆಗೆ ಎಲ್ಲಾ ರೀತಿಯ ಸಿದ್ದತೆ ಮಾಡಿಕೊಳ್ಳಲಾಗಿದೆ. ಆನೆಗಳಿಗೆ ಬಣ್ಣ ಹಚ್ಚುವ ಕಾರ್ಯ ಬೆಳಗ್ಗೆಯಿಂದನೇ ನಡೆಯುತ್ತಿದೆ. ಮಧ್ಯಾಹ್ನ 2.30  ಬಳಿಕ ಅಂಬಾರಿ ಕಟ್ಟುವ ಕಾರ್ಯ ಶುರುವಾಗಲಿದೆ. ಮೆರವಣಿಗೆಯ ಒಂದು ಗಂಟೆ ಮುಂಚಿತವಾಗಿ ಅಂಬಾರಿ ನೀಡುವಂತೆ ಕೇಳಲಾಗಿದೆ. ಶ್ರೀರಂಗಪಟ್ಟಣದ ಘಟನೆಯಿಂದ ಇನ್ನು ಹೆಚ್ಚಿನ ಎಚ್ಚರಿಕೆ ವಹಿಸಲಾಗಿದೆ. ಆನೆ ಹತ್ತಿರದಲ್ಲಿ ಬಣ್ಣದ ಕಾಗದ ಚಿಮ್ಮುವ ಪಟಾಕಿ ಸಿಡಿಸದಂತೆ ಎಚ್ಚರಿಕೆ ವಹಿಸಲಾಗಿದೆ.

ಮುಂಜಾಗ್ರತೆಯಾಗಿ ಅರವಳಿಕೆ ಚುಚ್ಚು ಮದ್ದು ತಜ್ಞ ವೈದ್ಯರ ತಂಡ ಕೂಡ ಸಜ್ಜಾಗಿದ್ದಾರೆ. ಯಾವುದೇ ತೊಂದರೆ ಇಲ್ಲದೆ ಮೆರವಣಿಗೆ ಯಶಸ್ವಿಯಾಗಿ ನಡೆಯಲಿದೆ ಎಂದು ಡಿಸಿಎಫ್ ಕರಿಕಾಳನ್ ತಿಳಿಸಿದರು.

Key words: Countdown – Jumbo ride- Captain Abhimanyu – Team – DCF -Karikalan, – preparation