Sunday, August 23, 2026

BDA Apartments

Home Front Page ಭ್ರಷ್ಟಾಚಾರ ಮುಕ್ತ ರಾಜ್ಯ ಮಾಡ್ತೇವೆ ಎನ್ನುವವರು ಮೂರು ವರ್ಷದಿಂದ ಏನ್ ಮಾಡಿದ್ರು..? ಅಮಿತ್ ಶಾಗೆ ಹೆಚ್.ಡಿ...

ಭ್ರಷ್ಟಾಚಾರ ಮುಕ್ತ ರಾಜ್ಯ ಮಾಡ್ತೇವೆ ಎನ್ನುವವರು ಮೂರು ವರ್ಷದಿಂದ ಏನ್ ಮಾಡಿದ್ರು..? ಅಮಿತ್ ಶಾಗೆ ಹೆಚ್.ಡಿ ಕುಮಾರಸ್ವಾಮಿ ಟಾಂಗ್.

ಶಿವಮೊಗ್ಗ,ಫೆಬ್ರವರಿ,24,2023(www.justkannada.in):  ಭ್ರಷ್ಟಾಚಾರ ಮುಕ್ತ ರಾಜ್ಯ ಮಾಡುತ್ತೇವೆ ಎಂದು ಕೇಂದ್ರ ಸಚಿವ ಅಮಿತ್ ಶಾ ಹೇಳ್ತಿದ್ದಾರೆ. ಆಡಳಿತ ಮಾಡಿದ ಮೂರು ವರ್ಷ ಏನು ಮಾಡಿದರು..? ಎಂದು ಪ್ರಶ್ನಿಸುವ ಮೂಲಕ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಟಾಂಗ್ ನೀಡಿದರು.

ಶಿವಮೊಗ್ಗದಲ್ಲಿ ಇಂದು ಮಾತನಾಡಿದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ,  ಅಮಿತ್ ಶಾ ಭಾಷಣ ವಿಶ್ವದ 8ನೇ ಅದ್ಭುತವಿದ್ದಂತೆ.  ಬಿಜೆಪಿ ಮಾಡಿದ ಭ್ರಷ್ಟಾಚಾರವನ್ನ ಮುಕ್ತ ಮಾಡುತ್ತಾರಾ ತಿಳಿಸಲಿ. ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಈವರೆಗೂ ಪ್ರಧಾನಿ ಮೋದಿ, ಅಮಿತ್ ಶಾ ಮುಖ ನೋಡಿ ವೋಟ್ ಹಾಕಿ ಅಂತಿದ್ದರು. ಈಗ ಬಿಎಸ್ ಯಡಿಯೂರಪ್ಪ ಮುಖ ನೋಡಿ ವೋಟ್ ಹಾಕಿ ಅಂತಿದ್ದಾರೆ ಎಂದು ಲೇವಡಿ ಮಾಡಿದರು.

ಜೆಡಿಎಸ್​ ಪಕ್ಷ ಕೇವಲ 2 ಜಿಲ್ಲೆಗಳಿಗೆ ಸೀಮಿತವಾಗಿಲ್ಲ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಖಾತೆ ತೆರೆಯುತ್ತೇವೆ. ಉತ್ತರ ಕರ್ನಾಟಕದಲ್ಲಿ ಈ ಬಾರಿ ನಾವು ಹೆಚ್ಚು ಸ್ಥಾನ ಗೆಲ್ಲುತ್ತೇವೆ. ಕರಾವಳಿ ಭಾಗದಲ್ಲಿ ನಾನು ಸಂಚರಿಸಿ ಪಕ್ಷ ಸಂಘಟನೆ ಮಾಡುತ್ತೇವೆ. ಪ್ರವಾಸ ಮಾಡಿ ಜನರ ನಾಡಿಮಿಡಿತ ತಿಳಿದುಕೊಳ್ಳುವೆ. ಉಳಿದಂತೆ ರಾಜ್ಯದಲ್ಲಿ ಜೆಡಿಎಸ್ ಸಂಪೂರ್ಣವಾಗಿ ಗಟ್ಟಿಯಾಗಿದೆ ಎಂದು ಹೆಚ್,ಡಿಕೆ ವಿಶ್ವಾಸ ವ್ಯಕ್ತಪಡಿಸಿದರು.

Key words: corruption-free- state – three years- HD Kumaraswamy -Tong – Amit Shah.