Thursday, August 20, 2026

BDA Apartments

Home Front Page ಬೆಂಗಳೂರಿನ ಪರಪ್ಪನ ಅಗ್ರಹಾರಕ್ಕೂಕಾಲಿಟ್ಟ ಕೊರೊನಾ ಸೋಂಕು: 30 ಖೈದಿಗಳಿಗೆ ಕೋವಿಡ್ 19 ದೃಢ

ಬೆಂಗಳೂರಿನ ಪರಪ್ಪನ ಅಗ್ರಹಾರಕ್ಕೂಕಾಲಿಟ್ಟ ಕೊರೊನಾ ಸೋಂಕು: 30 ಖೈದಿಗಳಿಗೆ ಕೋವಿಡ್ 19 ದೃಢ

ಬೆಂಗಳೂರು, ಜುಲೈ 12, 2020 (www.justkannada.in): ಇದೀಗ ಬೆಂಗಳೂರಿನ ಪರಪ್ಪನ ಅಗ್ರಹಾರಕ್ಕೂ ಮಾರಕ ಕೊರೊನಾ ಸೋಂಕು ಕಾಲಿಟ್ಟಿದೆ.

ಪರಪ್ಪನ ಅಗ್ರಹಾರದ 30 ಕೈದಿಗಳಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ವಿವಿಧ ಪ್ರಕರಣಗಳಲ್ಲಿ ಶಿಕ್ಷೆ ಅನುಭವಿಸುತ್ತಿರುವ ಕೈದಿಗಳಲ್ಲಿ ಆತಂಕ ಮೂಡಿಸಿದೆ.

ಜೈಲಿನಲ್ಲಿ ನೂರಾರು ಕೈದಿಗಳಿದ್ದು, ಇತ್ತೀಚೆಗೆ ಬಂದಿದ್ದ 80 ಮಂದಿಗೆ ಕೊರೊನಾ ಪರೀಕ್ಷೆ ಮಾಡಿಸಲಾಗಿತ್ತು. ಇದರಲ್ಲಿ 30 ಮಂದಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ.

ಸೋಂಕಿತ 30 ಕೈದಿಗಳನ್ನು ಹಜ್ ಭವನಕ್ಕೆ ಸ್ಥಳಾಂತರ ಮಾಡಲಾಗಿದ್ದು, ಇತರ ಕೈದಿಗಳಿಗೆ ಸಂಬಂಧಿಕರು ಹಾಗೂ ಹೊರಗಿನ ಯಾರನ್ನೂ ಭೇಟಿ ಆಗದಂತೆ ನಿರ್ಬಂಧ ವಿಧಿಸಲಾಗಿದೆ.