ಮಹಿಳಾ ಕ್ರಿಕೆಟರ್ ವೇದಾ ಕೃಷ್ಣಮೂರ್ತಿ ಕುಟುಂಬದ ಎಲ್ಲರಿಗೂ ತಗುಲಿದ ಕೊರೋನಾ ಸೋಂಕು…..

ಬೆಂಗಳೂರು,ಏಪ್ರಿಲ್,24,2021(www.justkannada.in):  ಭಾರತೀಯ ಮಹಿಳಾ ಕ್ರಿಕೆಟರ್ ವೇದಾ ಕೃಷ್ಣಮೂರ್ತಿ ಅವರ ಇಡೀ ಕುಟುಂಬಕ್ಕೆ ಕೊರೋನಾ ಸೋಂಕು ತಗುಲಿದೆ ಎಂಬ ಮಾಹಿತಿ ಲಭ್ಯವಾಗಿದೆ.jk

ವೇದಾ ಕೃಷ್ಣಮೂರ್ತಿ ಅವರ ತಾಯಿ ಚೆಲುವಾಂಬ ಅವರು ನಿನ್ನೆಯಷ್ಟೆ ಕೊರೊನಾದಿಂದ ಮೃತಪಟ್ಟಿದ್ದರು. ಇದೀಗ ವೇದಾ ಕೃಷ್ಣಮೂರ್ತಿ ಅವರ ತಂದೆ, ಅಣ್ಣ ಅತ್ತಿಗೆ, ಅಕ್ಕನಿಗೆ ಕೊರೋನಾ ಸೋಂಕು ತಗುಲಿದೆ. ಕ್ರಿಕೆಟರ್ ವೇದಾ ಕೃಷ್ಣಮೂರ್ತಿ ಅವರಿಗೆ ತಾಯಿಯ ಸಾವಿನ ಬೆನ್ನಲ್ಲೆ ಇದೀಗ ಕೊರೋನಾ ಶಾಕ್ ಎದುರಾಗಿದೆ.coronavirus-infection-family-cricketer-veda-krishnamurthy

ಈ ಬಗ್ಗೆ ಪ್ರತಿಕ್ರಿಯಿಸಿರುವ ಚಿಕ್ಕಮಗಳೂರು ಜಿಲ್ಲಾ ಆರೋಗ್ಯಾಧಿಕಾರಿ ಉಮೇಶ್, ವೇದಾ ಕೃಷ್ಣಮೂರ್ತಿ ಅವರ ಕುಟುಂಬಸ್ಥರು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

Key words: Coronavirus -infection – family – cricketer- Veda Krishnamurthy.