ಕೊರೋನಾ ವೈರಸ್ ಭೀತಿ: ಮೈಸೂರು ಮಂಡಕಳ್ಳಿ ವಿಮಾನ ನಿಲ್ದಾಣದಲ್ಲೂ ಹೈ ಅಲರ್ಟ್…

ಮೈಸೂರು,ಮಾ,4,2020(www.justkannada.in): ಇಡೀ ವಿಶ್ವವೇ  ಕೊರೋನಾ ವೈರಸ್ ಭೀತಿಗೆ ಬೆಚ್ಚಿಬಿದ್ದಿದ್ದು ನಮ್ಮ ದೇಶದಲ್ಲೂ ಕೊರೋನಾ ಸೋಂಕು ಕಾಣಿಸಿಕೊಂಡಿದೆ. ಈ ನಡುವೆ ಕೊರೋನಾ ವೈರಸ್ ಭೀತಿ ಹಿನ್ನೆಲೆ ಮೈಸೂರು ಮಂಡಕಳ್ಳಿ ವಿಮಾನ ನಿಲ್ದಾಣದಲ್ಲೂ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ.

ಮೈಸೂರಿನಿಂದ ಕೇರಳ, ಗೋವಾಕ್ಕೆ ವಿಮಾನಗಳ ಸಂಚಾರ ಹಿನ್ನೆಲೆ, ಕೊರೋನಾ ವೈರಸ್ ಬಗ್ಗೆ ಮೈಸೂರು ಮಂಡಕಳ್ಳಿ ವಿಮಾಣ ನಿಲ್ದಾಣದಲ್ಲಿ  ಮುಂಜಾಗ್ರತೆ ಕ್ರಮ ವಹಿಸಲಾಗಿದ್ದು, ಪ್ರಯಾಣಿಕರ ಆರೋಗ್ಯ ತಪಾಸಣೆ ಮಾಡಲಾಗುತ್ತಿದೆ. ವಿಮಾನ‌ ನಿಲ್ದಾಣದಲ್ಲೂ ತುರ್ತು ಚಿಕಿತ್ಸಾ ಕೇಂದ್ರ ಆರಂಭ ಮಾಡಲಾಗಿದೆ.

ಕೊರೋನಾ ವೈರಸ್ ಭೀತಿ ಹಿನ್ನೆಲೆ ಏರ್ ಪೋರ್ಟ್ ಸಿಬ್ಬಂದಿ ಹಾಗೂ ಭದ್ರತಾ ಪೊಲೀಸರಿಗೆ ಮಾಸ್ಕ್ ಗಳನ್ನ‌ ವಿತರಣೆ ಮಾಡಲಾಗಿದ್ದು ಸಿಬ್ಬಂದಿ ಹಾಗೂ ಪೊಲೀಸರು ಮಾಸ್ಕ್ ಧರಿಸಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಜತೆಗೆ ಕೊರೋನಾ ವೈಸರ್ ಬಗ್ಗೆ ಏರ್ ಪೋರ್ಟ್ ನಲ್ಲಿ ಜಾಗೃತಿ ಫಲಕಗಳನ್ನ ಅಳವಡಿಕೆ ಮಾಡಲಾಗಿದೆ.

Key words: coronavirus- Fear -High alert –Mysore- Mandakalli airport.