ಬೆಂಗಳೂರಿನ ಚಿತ್ರಮಂದಿರಗಳಿಗೂ ತಟ್ಟಿದ ಕೊರೋನಾ ವೈರಸ್ ಎಫೆಕ್ಟ್…

ಬೆಂಗಳೂರು,ಮಾ,12,2020(www.justkannada.in):  ವಿಶ್ವದಾದ್ಯಂತ ಭಾರಿ ಆತಂಕ ಸೃಷ್ಠಿಸಿರುವ ಮಹಾಮಾರಿ ಕೊರೋನಾ ವೈರಸ್ ಎಫೆಕ್ಟ್  ಇದೀಗ ಬೆಂಗಳೂರಿನ ಚಿತ್ರಮಂದಿರಗಳಿಗೂ ತಟ್ಟಿದೆ.

ಕೊರೊನಾ ವೈರಸ್ ವಿಶ್ವದೆಲ್ಲಡೆ ಹರಡಿದ್ದು ಭಾರತಕ್ಕೂ ಕೊರೋನಾ ಭೀತಿ ಎದುರಾಗಿದೆ. ಈ ನಡುವೆ ಬೆಂಗಳೂರಿನಲ್ಲಿ ಕೊರೋನಾ ವೈರಸ್ ಭೀತಿಯಿಂದಾಗಿ ಕಳೆದ ಎರಡು ದಿನಗಳಿಂದ ಚಿತ್ರಮಂದಿರಗಳಿಗೆ ಪ್ರೇಕ್ಷರ ಸಂಖ್ಯೆ ಭಾರಿ ಇಳಿಕೆಯಾಗಿದೆ ಎನ್ನಲಾಗುತ್ತಿದೆ.

ಹೊಸ ಹೊಸ ಚಿತ್ರಗಳು ಬಿಡುಗಡೆಯಾದರೇ ಬೆಂಗಳೂರಿನ ಚಿತ್ರಮಂದಿರಗಳಲ್ಲಿ ಜನರು ಸಿನಿಮಾ ವೀಕ್ಷಿಸಲು ಮುಗಿ ಬೀಳುತ್ತಿದ್ದರು. ಆದರೆ ಕೊರೊನಾ ವೈರಸ್ ಆತಂಕ ಸೃಷ್ಠಿಸಿರುವ ಹಿನ್ನೆಲೆ ಪ್ರೇಕ್ಷಕರು ಚಿತ್ರಮಂದಿರಗಳಿಗೆ ಬಂದು ಸಿನಿಮಾ ವೀಕ್ಷಿಸಲು ಹಿಂದೇಟು ಹಾಕುತ್ತಿದ್ದಾರೆ. ಈ ಮೂಲಕ ಸಿನಿರಂಗಕ್ಕೂ ಕೊರೋನಾ ವೈರಸ್  ಭೀತಿ ಪರಿಣಾಮ ಎದುರಾಗಿದೆ.

Key words: Coronavirus -effect – Bangalore- film- Theater