ಕೊರೋನಾ ಆತಂಕ ರಾಜ್ಯದ ಮೃಗಾಲಯದ ಪ್ರಾಣಿಗಳಿಗೆ ಇಲ್ಲ- ಬಿ.ಪಿ.ರವಿ ಅವರಿಂದ ಸ್ಪಷ್ಟನೆ…

0
268

ಮೈಸೂರು,ಮೇ,11,2021(www.justkannada.in): ರಾಜ್ಯದ ಯಾವುದೇ ಮೃಗಾಲಯದ ಪ್ರಾಣಿಗಳಿಗೆ ಸೋಂಕು ತಗುಲಿಲ್ಲ ಎಂದು ಮೃಗಾಲಯ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಪಿ.ರವಿ  ಸ್ಪಷ್ಟನೆ ನೀಡಿದ್ದಾರೆ.jk

ಈ ಕುರಿತು ಮಾತನಾಡಿ ಮಾಹಿತಿ ನೀಡಿರುವ ಮೃಗಾಲಯ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಪಿ.ರವಿ, ನಮ್ಮಲ್ಲಿ 5 ಮೃಗಾಲಯದಲ್ಲಿ ಸಿಂಹ, ಚಿರತೆ ಹುಲಿಗಳಿವೆ. ಆ ಪ್ರಾಣಿಗಳಿಗೆ ಮಾತ್ರ ಕೊರೊನಾ ತಗುಲುವ ಸಾಧ್ಯತೆ ಇದೆ. ಆದ್ರೆ ಯಾವುದೇ ಪ್ರಾಣಿಗಳಿಗೆ ಸೋಂಕಿನ ಲಕ್ಷಣ ಕಾಣಿಸಿಲ್ಲ. ನಾವು ಕೇಂದ್ರದ ಎಲ್ಲ ಮಾರ್ಗಸೂಚಿ ಅನುಸಿರಿಸಿದ್ದೇವೆ. ನಮ್ಮ ನಿರ್ದೇಶಕರು ಅಲ್ಲಿನ ಜನರ ಜೊತೆ ಮಾತನಾಡಿದ್ದಾರೆ.  ಸೋಂಕು ತಗುಲಿದ ಪ್ರಾಣಿಗಳಿಗೆ ಕೆಮ್ಮು ಬರುತ್ತೆ. ನಂತರ ಊಟ ಬಿಡ್ತುತ್ತವೆ. ನಮ್ಮಲ್ಲಿ ಆ ಥರದ ಸಮಸ್ಯೆ ಇರುವ ಯಾವುದೇ ಪ್ರಾಣಿಗಳು ಇಲ್ಲ ಎಂದು ಹೇಳಿದರು.corona-virus-not-state-zoo-animals-bp-ravi-clarified

ಬಹುಶಃ ಹೈದರಾಬಾದ್ ಮೃಗಾಲಯದಲ್ಲಿ Asymptomatic ಕೀಪರ್ ನಿಂದ ಸೋಂಕು ಬಂದಿರಬಹುದು. ಅಲ್ಲಿನ ಪ್ರಾಣಿಗಳಿಗೆ ಬೂಸ್ಟರ್ ಕೊಡ್ತಾರೆ. ನಾವು ಆ ರೀತಿಯ ಸಮಸ್ಯೆ ಆದ್ರೆ ನೀರಿನಲ್ಲಿ ಬೂಸ್ಟರ್ ಕೊಡುತ್ತೇವೆ. ಸದ್ಯಕ್ಕೆ ಕೊರೊನಾ ಆತಂಕ ರಾಜ್ಯದ ಮೃಗಾಲಯದ ಪ್ರಾಣಿಗಳಿಗೆ ಇಲ್ಲ ಎಂದು ಬಿ.ಪಿ.ರವಿ ಹೇಳಿದರು.

Key words: Corona virus-not-state- zoo animals- BP Ravi -clarified.