ದೇಶದಲ್ಲಿ ಒಂದೇ ದಿನ 29,429 ಮಂದಿಗೆ ವಕ್ಕರಿಸಿದ ಮಹಾಮಾರಿ ಕೊರೋನಾ…

ನವದೆಹಲಿ,ಜು,15,2020(www.justkannada.in):  ದೇಶಾದ್ಯಂತ  ಕಿಲ್ಲರ್ ಕೊರೋನಾ ವೈರಸ್  ದಿನೇ ದಿನೇ ವ್ಯಾಪಕವಾಗಿ ಹರಡುತ್ತಿದ್ದು, ಒಂದೇ ದಿನ ದೇಶದಲ್ಲಿ 29,429 ಮಂದಿಗೆ ಕೊರೋನಾ ಸೋಂಕು ತಗುಲಿದೆ.jk-logo-justkannada-logo

ಈ ಕುರಿತು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ. ಕಳೆದ 24 ಗಂಟೆಗಳಲ್ಲಿ 29,429 ಮಂದಿಗೆ  ಕೊರೋನಾ ಪಾಸಿಟಿವ್  ಕಂಡು ಬಂದಿದ್ದು ಈ ಮೂಲಕ ಸೋಂಕಿತರ ಸಂಖ್ಯೆ 9,36,181 ಕ್ಕೆ ಏರಿಕೆಯಾಗಿದೆ. 24 ಗಂಟೆಗಳಲ್ಲಿ ಕೊರೋನಾ ಸೋಂಕಿಗೆ 582 ಮಂದಿ ಬಲಿಯಾಗಿದ್ದಾರೆ. ಒಟ್ಟು ಈವರೆಗೆ ಕೊರೋನಾದಿಂದ ಸಾವನ್ನಪ್ಪಿದವರ ಸಂಖ್ಯೆ 24,309. Corona virus-29,429 people - single day - country.

9,36,181  ಕೊರೋನಾ ಸೋಂಕಿತರ ಪೈಕಿ 5,92,032 ಮಂದಿ ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ. ಇನ್ನು 3,19,840 ಕೊರೋನಾ ಸಕ್ರಿಯ ಪ್ರಕರಣಗಳಿವೆ.

Key words:  Corona virus-29,429 people – single day – country.