Monday, October 5, 2026

BDA Apartments

ವಿನೂತನ ಪ್ರಯತ್ನ: ಮೈಸೂರಿನಲ್ಲಿ ಪ್ರಸಾದದ ಬದಲು ಮಾಸ್ಕ್ ವಿತರಣೆ… BDA JK_Adv BDA Adv
Home Front Page ಕೊರೋನಾ ಲಸಿಕೆ ಉಚಿತ ವಿಚಾರ: ಸಮರ್ಥಿಸಿಕೊಂಡ ಸಂಸದೆ ಶೋಭಾ ಕರಂದ್ಲಾಜೆ….

ಕೊರೋನಾ ಲಸಿಕೆ ಉಚಿತ ವಿಚಾರ: ಸಮರ್ಥಿಸಿಕೊಂಡ ಸಂಸದೆ ಶೋಭಾ ಕರಂದ್ಲಾಜೆ….

ಮೈಸೂರು,ಅಕ್ಟೋಬರ್,24,2020(www.justkannada.in):  ಬಿಹಾರದಲ್ಲಿ ಕೊರೋನಾ ಲಸಿಕೆ ಉಚಿತ ನೀಡುವ ಬಗ್ಗೆ ಚುನಾವಣಾ ಪ್ರಣಾಳಿಕೆ ತಿಳಿಸಿರುವ ವಿಚಾರವನ್ನ  ಸಂಸದೆ ಶೋಭಾ ಕರಂದ್ಲಾಜೆ ಸಮರ್ಥಿಸಿಕೊಂಡಿದ್ದಾರೆ.jk-logo-justkannada-logo

ಮೈಸೂರಿನಲ್ಲಿ ಈ ಬಗ್ಗೆ ಮಾತನಾಡಿರುವ ಸಂಸದೆ ಶೋಭಾ ಕರಂದ್ಲಾಜೆ, ನಮ್ಮದೆ ಸರ್ಕಾರ ಇದೆ, ದೇಶದ ಎಲ್ಲರಿಗು ಉಚಿತ ಲಸಿಕೆ ನೀಡುವುದು ನಮ್ಮ ಗುರಿ. ಇದಕ್ಕಾಗಿ ಸರ್ಕಾರ ಹಣ ಖರ್ಚು ಮಾಡುತ್ತಿದೆ. ಹೀಗಾಗಿಯೇ ಉಚಿತವಾಗಿ ಕೊಡುತ್ತೇವೆ ಎನ್ನುವುದರಲ್ಲಿ ತಪ್ಪಿಲ್ಲ. ಆದಷ್ಟು ಬೇಗ ರಾಜ್ಯದ ಜನರಿಗೆ ಕೊರೋನಾ ಲಸಿಕೆ ಸಿಗಲಿದೆ ಎಂದು ಹೇಳಿದ್ದಾರೆ.Corona Vaccine -Free- mysore-MP-Shobha Karandlaje,

ಕಾಂಗ್ರೆಸ್ ಪಕ್ಷದ ಅಸ್ತಿತ್ವಕ್ಕಾಗಿ ಗುದ್ದಾಟ ನಡೆಸ್ತಿದ್ದಾರೆ….

ಇದೇ ವೇಳೆ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಸಂಸದೆ ಶೋಭಾ ಕರಂದ್ಲಾಜೆ, ಕಾಂಗ್ರೆಸ್ ಎಲ್ಲಾ ಸಂದರ್ಭದಲ್ಲೂ ಗುದ್ದಾಟ ಮಾಡುತ್ತಾರೆ.  ಈಗ ಅವರು ಕಾಂಗ್ರೆಸ್ ಪಕ್ಷದ ಅಸ್ತಿತ್ವಕ್ಕಾಗಿ ಗುದ್ದಾಟ ನಡೆಸುತ್ತಿದ್ದಾರೆ. ಅಧಿಕಾರದಲ್ಲಿ ಇದ್ದಾಗಲೂ, ಇಲ್ಲದಿರುವಾಗಲೂ ಕಾಂಗ್ರೆಸ್ ಗುದ್ಧಾಟ ನಡೆಸುತ್ತಾರೆ. ಇದು ಕಾಂಗ್ರೆಸ್ ಉಳಿವಿಗಾಗಿ ನಡೆಯುತ್ತಿರುವ ಚುನಾವಣೆ. ಹಾಗಾಗಿ ಅವರ ಗುದ್ಧಾಟ ಬಿಜೆಪಿಗೆ ಏನು ಎಫೆಕ್ಟ್ ಆಗಲ್ಲ ಎಂದು ಸಂಸದೆ ಶೋಭಾ ಕರಂದ್ಲಾಜೆ ತಿಳಿಸಿದರು.

Key words: Corona Vaccine -Free- mysore-MP-Shobha Karandlaje,