Friday, August 14, 2026

BDA Apartments

Home Front Page ಮೈಸೂರಿನಲ್ಲಿ ಇಂದು ಸಹ ಕೊರೋನಾ ಆರ್ಭಟ: 100ಕ್ಕೂ ಹೆಚ್ಚು ಪಾಸಿಟಿವ್ ಕೇಸ್ ಸಾಧ್ಯತೆ..

ಮೈಸೂರಿನಲ್ಲಿ ಇಂದು ಸಹ ಕೊರೋನಾ ಆರ್ಭಟ: 100ಕ್ಕೂ ಹೆಚ್ಚು ಪಾಸಿಟಿವ್ ಕೇಸ್ ಸಾಧ್ಯತೆ..

ಮೈಸೂರು,ಜು,16,2020(www.justkannada.in):  ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಮಹಾಮಾರಿ ಕೊರೋನಾ ಅಬ್ಬರ ಹೆಚ್ಚಾಗಿದ್ದು, ಇಂದು ಸಹ 100ಕ್ಕೂ ಹೆಚ್ಚು ಕೊರೋನಾ ಪಾಸಿಟಿವ್ ಪ್ರಕರಣಗಳು ಕಂಡು ಬರುವ ಸಾಧ್ಯತೆ ಇದೆ.jk-logo-justkannada-logo

ಮೈಸೂರಿನಲ್ಲಿ ಕಳೆದ ಮಂಗಳವಾರ 125 ನಿನ್ನೆ 99 ಮಂದಿಗೆ ಕೊರೋನಾ ಸೋಂಕು ದೃಢವಾಗಿತ್ತು. ಈ ನಡುವೆ ಇಂದು ಸಹ ಮೈಸೂರಿನಲ್ಲಿ 100 ಕ್ಕೂ ಹೆಚ್ಚು ಪಾಸಿಟಿವ್ ಕೇಸ್ ಸಾಧ್ಯತೆ ಇದೆ. ದಿನೇ ದಿನೇ ಕೊರೋನಾ ಪ್ರಕರಣ ಹೆಚ್ಚಾಗುತ್ತಲೇ ಇದ್ದು ಮೈಸೂರಿನ ಗ್ರಾಮೀಣ ಭಾಗಕ್ಕೂ ಸೋಂಕು ಹರಡುತ್ತಿದೆ. ಹೀಗಾಗಿ ಮೈಸೂರಿನ ಗ್ರಾಮೀಣ ಭಾಗದಲ್ಲಿ ಆತಂಕ ಹೆಚ್ಚಾಗಿದ್ದು, ಕೊರಾನಾ ತಡೆಗೆ ಜಿಲ್ಲಾಡಳಿತ  ಹರಸಾಹಸ ಪಡುತ್ತಿದೆ.corona-today-mysore-more-than-100-positive-cases

ಜಿಲ್ಲೆಯ ಹುಣಸೂರು, ಕೆ. ಅರ್ ನಗರ,ಟಿ ನರಸೀಪುರ, ನಂಜನಗೂಡು ಭಾಗದಲ್ಲಿ ಹೆಚ್ಚಿನ ಸೋಂಕು ಪತ್ತೆಯಾಗಿದೆ. ಮೈಸೂರು ತಾಲ್ಲೂಕಿನ ಇಲವಾಲ, ಹುಟಗಳ್ಳಿಯಲ್ಲಿ ಕೊರೋನಾ ಸೊಂಕು ಕಂಡು ಬಂದಿದೆ. ಇನ್ನು ಮೈಸೂರು ಮಹಾನಗರ ಪಾಲಿಕೆಯ ಇಬ್ಬರು ಪೌರ ಕಾರ್ಮಿಕ ಸಿಬಂದ್ದಿಗೆ ಸೊಂಕು ತಗುಲಿದೆ. ಹಾಗೆಯೇ ವೈದ್ಯರಿಗೂ ಕೊರೋನಾ ವಕ್ಕರಿಸಿದ್ದು, ದಿನೇ ದಿನೇ ಹೆಚ್ಚುತ್ತಿರುವ ಕೊರೋನಾ ಸೋಂಕು ತಡೆಯಲು ಜಿಲ್ಲಾಡಳಿತ ಶತಪ್ರಯತ್ನ ನಡೆಸುತ್ತಿದೆ.

Keywords: Corona – today – Mysore-More than- 100 positive- cases