ಗ್ರೀನ್ ಝೋನ್ ಹಾಸನಕ್ಕೂ ತಟ್ಟಿದ ಕೊರೊನಾ: ಮುಂಬೈನಿಂದ ಬಂದಿದ್ದವರಿಗೆ ಪಾಸಿಟಿವ್

ಹಾಸನ, ಮೇ 12, 2020 (www.justkannada.in): ಗ್ರೀನ್ ಜೋನ್ ನಲ್ಲಿದ್ದ ಹಾಸನ ಜಿಲ್ಲೆಯಲ್ಲಿ ಕೊರೊನಾ ಸೋಂಕು ಎಂಟ್ರಿಕೊಟ್ಟಿದೆ. ಮುಂಬೈನಿಂದ ಆಗಮಿಸಿದ್ದ ಒಂದೇ ಕುಟುಂಬದ ಐವರಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ.

ಮೇ 8ರಂದು ಮುಂಬೈನಿಂದ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ಸಮೀಪದ ಗ್ರಾಮಕ್ಕೆ ಒಂದೇ ಕುಟುಂಬದ ಐವರು ಧಾವಿಸಿದ್ದರು. ಮಂಡ್ಯದ ಯುವಕನೊಬ್ಬ ಇವರೊಂದಿಗೆ ಆಗಮಿಸಿದ್ದ. ಈ ಯುವಕ ನೀಡಿದ ಮಾಹಿತಿ ಅನ್ವಯ ಈ ಐವರನ್ನು ಪತ್ತೆ ಹಚ್ಚಲಾಗಿದೆ.

ಇವರ ಟ್ರಾವೆಲ್ ಹಿಸ್ಟರಿಯನ್ನು ಕಲೆಹಾಕಿದ ಆರೋಗ್ಯ ಇಲಾಖೆ ಅಧಿಕಾರಿಗಳು ಕೂಡಲೇ ಚನ್ನರಾಯಪಟ್ಟಣ ಸಮೀಪದ ಗ್ರಾಮಕ್ಕೆ ತೆರಳಿ ಮುಂಬೈನಿಂದ ಆಗಮಿಸಿದ್ದವರ ಗಂಟಲು ದ್ರವ ಸಂಗ್ರಹಿಸಿ ಪರೀಕ್ಷೆಗೆ ರವಾನಿಸಿದ್ದರು.

ಇಂದು ವೈದ್ಯಕೀಯ ವರದಿ ಬಂದಿದ್ದು, ಇದರಲ್ಲಿ ಐವರಿಗೂ ಮಾರಕ ಕೊರೊನಾ ಸೋಂಕು ದೃಢಪಟ್ಟಿದೆ. ಸದ್ಯ ಈ ಎಲ್ಲ ಸೋಂಕಿತರನ್ನು ಜಿಲ್ಲಾಸ್ಪತ್ರೆಗೆ ಶಿಫ್ಟ್ ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ.