ಮಂಡ್ಯದಲ್ಲಿ ಪೊಲೀಸ್ ಅಧಿಕಾರಿಗಳಿಗೆ ಕೊರೋನಾ ಶಾಕ್: ಎಸ್​ಪಿ ಸೇರಿ ಹಲವರಿಗೆ ಕೋವಿಡ್ ಸೋಂಕು ದೃಢ.

ಮಂಡ್ಯ,ಜನವರಿ,8,2022(www.justkannada.in):  ಮಂಡ್ಯ ಜಿಲ್ಲೆಯಲ್ಲಿ  ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್ ಯತೀಶ್   ಅವರು ಸೇರಿದಂತೆ ಹಲವು ಪೊಲೀಸ್ ಅಧಿಕಾರಿಗಳಿಗೆ ಕೊರೊನಾ   ಸೋಂಕು ತಗುಲಿದೆ.

ಮಂಡ್ಯ ಎಸ್​ಪಿ ಎನ್ ಯತೀಶ್, ಎಎಸ್​ಪಿ ಧನಂಜಯ್, ಮಂಡ್ಯ ಡಿವೈಎಸ್​​ಪಿ ಮಂಜುನಾಥ್, ನಾಗಮಂಗಲ, ಮಳವಳ್ಳಿ ಡಿವೈಎಸ್​ಪಿ, ನಾಗಮಂಗಲ ಗ್ರಾಮಾಂತರ ಸಿಪಿಐ, ಬೆಳ್ಳೂರು ಪಿಎಸ್ ಸೇರಿದಂತೆ ಹಲವರಿಗೆ ಕೊರೋನಾ ಸೋಂಕು ಕಾಣಿಸಿಕೊಂಡಿದ್ದು ಇದೀಗ ಪೊಲೀಸ್ ಅಧಿಕಾರಿಗಳು ಸ್ವತಃ ಹೋಂ ಐಸೋಲೇಷನ್ ನಲ್ಲಿದ್ದಾರೆ.

ಇತ್ತೀಚೆಗೆ ಮಂಡ್ಯ ಡಿಎಆರ್ ಆವರಣದಲ್ಲಿ ಪೊಲೀಸ್ ವಾರ್ಷಿಕ ಕ್ರೀಡಾಕೂಟ ನಡೆದಿತ್ತು. ಕ್ರೀಡಾಕೂಟದ ಬಳಿಕ ಯುವ ಜನೋತ್ಸವದ ಭದ್ರತೆಯಲ್ಲಿ ಪೊಲೀಸರು ಇದ್ದರು. ಭದ್ರತೆಯಲ್ಲಿದ್ದ ಪೊಲೀಸ್ ಅಧಿಕಾರಿಗೆ ಇದೀಗ ಸೋಂಕು ತಗುಲಿರುವುದು ದೃಢಪಟ್ಟಿದೆ.ಹಿರಿಯ ಅಧಿಕಾರಿಗಳಿಗೆ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆ ಸಿಬ್ಬಂದಿಗೆ ಆತಂಕ ಉಂಟಾಗಿದೆ.

Key words: Corona-shock -police officers – Mandya