ನಗರ ಭಾಗದಲ್ಲೆ ಕೊರೋನಾ ಪ್ರಕರಣಗಳು ಹೆಚ್ಚಾಗುತ್ತಿದೆ: ತಾಲ್ಲೂಕು ಸೆಂಟರ್ ಗಳಲ್ಲೂ ಆಕ್ಸಿಂಜನ್ ಬೆಡ್ ಗಳ ನಿರ್ಮಾಣಕ್ಕೆ ಕ್ರಮ -ಮೈಸೂರು ಡಿಸಿ ಶರತ್

ಮೈಸೂರು,ಸೆಪ್ಟಂಬರ್,24,2020(www.justkannada.in):  ಮೈಸೂರು ನಗರ ಹಾಗೂ ಜಿಲ್ಲೆಯಲ್ಲಿ ಕರೋನ ಕೇಸ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ನಗರಭಾಗದಲ್ಲೆ ಪ್ರಕರಣಗಳು ಹೆಚ್ಚಾಗುತ್ತಿವೆ. ಕರೋನ ನಿಯಂತ್ರಣ ಕ್ಕೆ ತುರ್ತುಕ್ರಮ ಅಗತ್ಯವಿದೆ ಎಂದು ಮೈಸೂರು ಡಿಸಿ ಶರತ್ ತಿಳಿಸಿದರು.

ಮೈಸೂರಿನಲ್ಲಿ ಇಂದು ಮಾತನಾಡಿದ ಡಿಸಿ ಶರತ್,  ಸೊಂಕೀತರನ್ನ ಐಸೋಲೇಟ್ ಮಾಡಿ ಚಿಕಿತ್ಸೆ ಮಾಡಬೇಕಿದೆ. ನಮಗೆ ಪ್ರೈಮರಿ ಸೇಕೆಂಡರಿ ಕಾಂಟ್ಯಾಕ್ಟ್ ಐಡೆಂಟಿಫಿಕೆಷನ್ ಕಂಡುಗಿಡಿಯೋದು ಕಷ್ಟವಾಗುತ್ತಿದೆ. ತಪ್ಪು ಮಾಹಿತಿ ನೀಡಿ ತಪ್ಪಿಸಿಕೊಳ್ಳೊ ಕೆಲಸವಾಗುತ್ತಿದೆ. ಸೊಂಕು ನಿಯಂತ್ರಣಕ್ಕೆ ಹೆಚ್ಚಿನ ಟೆಸ್ಟ್ ಅಗತ್ಯವಿದೆ. ಮೊದಲು ಟೆಸ್ಟ್ ಗಳು ಕೇವಲ ಬೆಳಿಗ್ಗೆ ಮಾತ್ರ ನಡೆಯುತ್ತಿದ್ದವು. ಟೆಸ್ಟ್ ಗಳನ್ನ ಹೆಚ್ಚಿಸೋ ಹಿನ್ನಲೆಯಲ್ಲಿ ಮಧ್ಯಹ್ನಾದ ನಂತರವು ಪರೀಕ್ಷೆಗಳನ್ನ ನಡೆಸಲಾಗುವುದು. ಹೈಪರ್ ಟೆನ್ಷನ್ ಶುಗರ್ ಇರುವಂತವರ ಲಿಸ್ಟ್ ನಮ್ಮಲಿದೆ. ಮೈಸೂರು ನಗರದಲ್ಲಿ ಇವರ ಬಗ್ಗೆ ಸರ್ವೇ ಮಾಡಲಿದ್ದೇವೆ. ಅವೆರಲ್ಲರ ಬಗ್ಗೆ ಸರ್ವೇ ಮಾಡಲಾಗುವುದು. ಜಿಲ್ಲೆಯಲ್ಲಿ ಕೊನೆಯ ಹಂತದಲ್ಲಿ ಆಸ್ಪತ್ರೆಗೆ ತರೋದ್ರಿಂದ ಸಾವಿನ ಸಂಖ್ಯೆ ಹೆಚ್ಚಾಗುತ್ತಿದೆ. ಇದನ್ನ ತಪ್ಪಿಸಲು ಸರ್ವೇ ಮಾಡಲಿದ್ದೇವೆ. ಸರ್ವೇಗೆ ಬರುವವರಿಗೆ ಮುಕ್ತಾವಾಗಿ ಸಾರ್ವಜನಿಕರು ಸಹಕರಿಸಬೇಕು. ಸರ್ವೆಗೆ ಬಂದವರಿಗೆ ಸರಿಯಾಗಿ ಸ್ಪಂದಿಸದೇ ತೊಂದರೆ ನೀಡಿದ್ದಲ್ಲಿ ಅಂತವರ ವಿರುದ್ದ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.mysore-corona-increase-dc-sharath-police-commissioner-meeting-mask-public

ಸರ್ಕಾರದ ಆದೇಶದಂತೆ ೫೦ ರಷ್ಟು ಬೆಡ್ ಖಾಸಗಿ ಆಸ್ಪತ್ರೆಗಳು ನೀಡಬೇಕಿತ್ತು. ಆದರೆ ಇದುವರೆಗೆ ಖಾಸಗಿ ಆಸ್ಪತ್ರೆಗಳು ಬೆಡ್ ನೀಡಿರಲಿಲ್ಲ. ಖಾಸಗಿ ಆಸ್ಪತ್ರೆಗಳ ಜೊತೆ ಸಭೆ ಮಾಡಲಾಗಿದೆ. ಜಿಲ್ಲೆಯಲ್ಲಿ ೩೬೧೦ ಬೆಡ್ ನಲ್ಲಿ ೧೨೦೦ಕ್ಕೂ ಅಧಿಕ ಬೆಡ್ ಕೊಡಿಸಲಾಗಿದೆ. ಹೊಸದಾಗಿ ೮೭ ಐಸಿಯು ಲಭ್ಯವಿದೆ. ಮುಂದಿನ ದಿನಗಳಲ್ಲಿ ಬೆಡ್ ಗಳ ಸಂಖ್ಯೆ ಹೆಚ್ಚು ಬೇಕಾಗೋ ಸಾಧ್ಯತೆ ಇದೆ. ಇದೇ ನಿಟ್ಟಿನಲ್ಲಿ ತಾಲ್ಲೂಕು ಮಟ್ಟದಲ್ಲೂ ಸಾಕಷ್ಟು ಮುನ್ನೇಚ್ಚರಿ ಕ್ರಮವಹಿಸಲಾಗಿದೆ. ಮುಂದಿನ ದಿನಗಳಲ್ಲಿ ತಾಲ್ಲೂಕು ಸೆಂಟರ್ ಗಳಲ್ಲೂ ಆಕ್ಸಿಂಜನ್ ಬೆಡ್ ಗಳ ನಿರ್ಮಾಣಕ್ಕೆ ಕ್ರಮ ವಹಿಸಲಾಗಿದೆ ಎಂದು ಡಿಸಿ ಶರತ್ ತಿಳಿಸಿದರು.

key words: corona- mysore- rise – Mysore DC Sarath