ಕೊರೋನಾ ಭೀತಿ: ಬೆಂಗಳೂರು ವಿವಿಯಲ್ಲಿ ಮಾಸ್ಕ್ ಕಡ್ಡಾಯ.

ಬೆಂಗಳೂರು,ಡಿಸೆಂಬರ್,23,2022(www.justkannada.in):  ಕಳೆದ ಹಲವು ದಿನಗಳಿಂದ ತಗ್ಗಿದ್ದ ಕೊರೋನಾ ಭೀತಿ ಇದೀಗ ಮತ್ತೆ ಶುರುವಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಮುಂಜಾಗ್ರತಾ ಕ್ರಮಕ್ಕೆ ಮುಂದಾಗಿದೆ. ಈ ಮಧ್ಯೆ ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ಮಾಸ್ಕ್ ಕಡ್ಡಾಯಗೊಳಿಸಲಾಗಿದೆ.

ಬೆಂಗಳೂರು ವಿವಿಯಲ್ಲಿ ವಿದ್ಯಾರ್ಥಿಗಳು, ಅಧಿಕಾರಿಗಳು ಸಿಬ್ಬಂದಿಗಳಿಗೆ ಮಾಸ್ಕ್ ಕಡ್ಡಾಯ ಮಾಡಲಾಗಿದೆ. ಮಾಸ್ಕ್ ಧರಿಸುವುದನ್ನ ಕಡ್ಡಾಯಗೊಳಿಸಿ ವಿವಿ ಆದೇಶ ಹೊರಡಿಸಿದೆ.  ಮಾಸ್ಕ್ ಜತೆ ಬೂಸ್ಟರ್ ಡೋಸ್ ಪಡೆಯುವಂತೆಯೂ ಸಹ ವಿವಿ ಸೂಚನೆ ನೀಡಿದೆ.

Key words:  Corona-Mask – Bangalore University.