ತುಮಕೂರು ಸಿದ್ಧಗಂಗಾ ಮಠಕ್ಕೂ ತಟ್ಟಿದ ಕೊರೋನಾ ಎಫೆಕ್ಟ್…

ತುಮಕೂರು,ಮಾ,13,2020(www.justkannada.in):  ವಿಶ್ವದೆಲ್ಲೆಡೆ ಆತಂಕ ಸೃಷ್ಟಿಸಿರುವ ಮಾರಕ ಕೊರೊನಾ ಸೋಂಕಿನಿಂದ  ರಾಜ್ಯದಲ್ಲಿ ಒಂದು ಬಲಿಯಾಗಿದ್ದು ಐವರಲ್ಲಿ ಕೊರೋನಾ ಪತ್ತೆಯಾಗಿದೆ. ಈ ಹಿನ್ನೆಲೆ ನಾಳೆಯಿಂದ ಒಂದು ವಾರಗಳ ಕಾಲ ಮಾಲ್ ಗಳು ಥಿಯೇಟರ್ ಗಳು ಮದುವೆ ಸಮಾರಂಭಗಳಿಗೆ ರಾಜ್ಯ ಸರ್ಕಾರ ಬ್ರೇಕ್ ಹಾಕಿದೆ.

ಈ ಮಧ್ಯೆ ಕೊರೋನಾ ಸೋಂಕಿನ ಎಫೆಕ್ಟ್ ನಡುವೆ ತುಮಕೂರಿನ ಸಿದ್ದಗಂಗಾ ಮಠಕ್ಕೆ ತಟ್ಟಿದೆ.ಕೊರೋನಾ ಭೀತಿಯಿಂದಾಗಿ  ಮಠಕ್ಕೆ ಭೇಟಿ ನೀಡುವ ಭಕ್ತರ ಸಂಖ್ಯೆ ಇಳಿಮುಖವಾಗಿದೆ. ಮಠದಲ್ಲಿ ಸದ್ಯ ವಿದ್ಯಾರ್ಥಿಗಳಿಗೆ ಪರೀಕ್ಷೆಗಳು ನಡೆಯುತ್ತಿದೆ. ಕೊರೋನಾ ಸೋಂಕು ಭಿತಿ ಹಿನ್ನೆಲೆ ಪರೀಕ್ಷೆಗಳನ್ನ ಬೇಗ ಮುಗಿಸಿ ವಿದ್ಯಾರ್ಥಿಗಳನ್ನು ಆದಷ್ಟು ಬೇಗ ಮನೆಗಳಿಗೆ ಕಳುಹಿಸಲು ಆಡಳಿತ ಮಂಡಳಿ ನಿರ್ಧರಿಸಿದೆ.

ಮಠದಲ್ಲಿರುವ 10 ಸಾವಿರ ವಿದ್ಯಾರ್ಥಿಗಳು ಮಠದಲ್ಲಿ ಓದುತ್ತಿದ್ದು, 1 ರಿಂದ 8ನೇ ತರಗತಿಯವರೆಗಿನ ವಿದ್ಯಾರ್ಥಿಗಳಿಗೆ ಪರೀಕ್ಷೆಗಳು ನಡೆಯುತ್ತಿದೆ. ಪರೀಕ್ಷೆ ಮುಗಿದ ಕೂಡಲೇ ಅವರನ್ನು ಊರಿಗೆ ಕಳುಹಿಸಲು ನಿರ್ಧರಿಸಲಾಗಿದೆ. ಇನ್ನು ಏಪ್ರಿಲ್ 5 ರಂದು ಶಿವೈಕ್ಯ ಡಾ.ಶಿವಕುಮಾರ ಸ್ವಾಮೀಜಿ ಅವರ 113ನೇ ಜಯಂತಿಯನ್ನು ಆಯೋಜಿಸಲು ತೀರ್ಮಾನಿಸಲಾಗಿತ್ತು. ಆದರೆ, ಜಿಲ್ಲಾಡಳಿತದಿಂದ ಅನುಮತಿ ಸಿಗದ ಹಿನ್ನೆಲೆಯಲ್ಲಿ ಕಾರ್ಯಕ್ರಮಕ್ಕೆ ಬ್ರೇಕ್ ಬಿದ್ದಿದೆ ಎಂದು ಮಠದ ಆಡಳಿತಾಧಿಕಾರಿ ವಿಶ್ವನಾಥ್  ಹೇಳಿದ್ದಾರೆ.

Key words: Corona -Effect –Tumkur- Siddhaganga Math.