ರಾತ್ರಿ ವೇಳೆ ಕೆಎಸ್ ಆರ್ ಟಿಸಿ ಬಸ್ ಸಂಚಾರ  ಪುನಾರಂಭ….

ಬೆಂಗಳೂರು,ಜೂ,6,2020(www.justkannada.in):  ಕೊರೋನಾ ಮಹಾಮಾರಿಯಿಂದ ಲಾಕ್ ಡೌನ್  ಮಾಡಿದ ಹಿನ್ನೆಲೆ, ಎರಡು ತಿಂಗಳಿನಿಂದ ಸ್ಥಗಿತಗೊಂಡಿದ್ದ ಕೆಎಸ್ಆರ್ಟಿಸಿ ರಾತ್ರಿ ಸೇವೆ ಕಳೆದ ರಾತ್ರಿಯಿಂದ ಪುನರಾರಂಭಗೊಂಡಿದೆ.corona-effect-ksrtc-bus-restart-night

ಇನ್ನು ರಾತ್ರಿ ವೇಳೆಯಲ್ಲಿಯೂ ರಾಜ್ಯ ಸಾರಿಗೆ ಬಸ್ಸುಗಳು ರಸ್ತೆಗಿಳಿಯಲಿವೆ. ಈ ಹಿಂದೆ ಲಾಕ್ ಡೌನ್ ಸಡಿಲ ಮಾಡಿದ ವೇಳೆ ಬೆಳಗ್ಗೆ 7 ರಿಂದ ರಾತ್ರಿ 7 ರವರೆಗೆ ಮಾತ್ರವೇ ಬಸ್ಸುಗಳು ಸಂಚಾರ ನಡೆಸುತ್ತಿದ್ದವು. ಇದೀಗ ರಾತ್ರಿ ವೇಳೆಯಲ್ಲಿ ಬಸ್ ಸಂಚಾರಕ್ಕೆ ಸರ್ಕಾರ ಅನುಮತಿ ನೀಡಿರುವ ಹಿನ್ನೆಲೆ ಮತ್ತೆ ರಾತ್ರಿ ವೇಳೆಯಲ್ಲಿ  ಕೆಎಸ್ ಆರ್ ಟಿಸಿ ಬಸ್ ಗಳು ಸಂಚರಿಸಲಿವೆ.

ಪ್ರಯಾಣಿಕರ ಸಂಖ್ಯೆಗನುಗುಣವಾಗಿ ಬಸ್  ಸಂಚಾರ ನಡೆಸಲು ಕೆಎಸ್ಆರ್ಟಿಸಿ ನಿರ್ಧಾರ ಮಾಡಿದೆ. ಜತೆಗೆ ಮಾಸ್ಕ್ ಧರಿಸುವುದು, ಪ್ರಯಾಣಕ್ಕೆ ಮುನ್ನ ಥರ್ಮಲ್ ಸ್ಕ್ರೀನಿಂಗ್ ಕಡ್ಡಾಯವಾಗಿದೆ.

Key words: corona effect-KSRTC -bus – restart- night.