Monday, September 14, 2026

BDA Apartments

ಕರೋನಾ ಎಫೆಕ್ಟ್: ಸಾರ್ವಜನಿಕರಿಗೆ ಉಚಿತ ಮಾಸ್ಕ್ ವಿತರಣೆ… BDA JK_Adv BDA Adv
Home Front Page ಕರೋನಾ ಎಫೆಕ್ಟ್: ಸಾರ್ವಜನಿಕರಿಗೆ ಉಚಿತ ಮಾಸ್ಕ್ ವಿತರಣೆ…

ಕರೋನಾ ಎಫೆಕ್ಟ್: ಸಾರ್ವಜನಿಕರಿಗೆ ಉಚಿತ ಮಾಸ್ಕ್ ವಿತರಣೆ…

ಮೈಸೂರು,ಮಾ,14,2020(www.justkannada.in):  ಕೊರೋನಾ ವೈರಸ್ ಹರಡುವ ಭೀತಿ ಹಿನ್ನೆಲೆ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಸಾರ್ವಜನಿಕರಿಗೆ ಹಾಗೂ ಬೀದಿ ಬದಿ ವ್ಯಾಪಾರಸ್ಥರಿಗೆ ಉಚಿತವಾಗಿ ಮಾಸ್ಕ್ ವಿತರಣೆ ಮಾಡಲಾಯಿತು.

ಮೈಸೂರಿನ ನಂಜಮಳಿಗೆ ವೃತ್ತದಲ್ಲಿ ಅಪೂರ್ವ ಸ್ನೇಹ ಬಳಗದ ವತಿಯಿಂದ ಹಿರಿಯ ವೈದ್ಯೆ ಲಕ್ಷ್ಮಿ ನೇತೃತ್ವದಲ್ಲಿ ಮಾಸ್ಕ್ ಅಭಿಯಾನ ನಡೆಸಲಾಯಿತು. ಈ ವೇಳೆ ಸಾರ್ವಜನಿಕರಿಗೆ ಬೀದಿಬದಿ ವ್ಯಾಪಾರಿಗಳಿಗೆ ಮಾಸ್ಕ್ ವಿತರಣೆ ಮಾಡಲಾಯಿತು. ನೂರಕ್ಕೂ ಹೆಚ್ಚು ಮಾಸ್ಕ್ ಗಳನ್ನ ವಿತರಿಸಿತು.

ಮಾಸ್ಕ್ ನೀಡಿ ಆರೋಗ್ಯ ಕಾಪಾಡಿಕೊಳ್ಳುವಂತೆ ವೈದ್ಯರು, ಅಪೂರ್ವ ಸ್ನೇಹ ಬಳಗದ ಸದಸ್ಯರು ಸಾರ್ವಜನಿಕರಿಗೆ ಸಲಹೆ ನೀಡಿದರು. ಜತೆಗೆ ಅವರೇ ಖುದ್ದಾಗಿ ವ್ಯಾಪರಸ್ಥರಿಗೆ ಮಾಸ್ಕ್ ಹಾಕಿ ಜಾಗೃತಿ ಮೂಡಿಸಿದರು.  ಕರೋನಾ ಬಗ್ಗೆ ಆತಂಕ ಬೇಡ, ಎಚ್ಚರ ಇರಲಿ ಎಂದು ಸಂದೇಶ  ರವಾನಿಸಿದರು.

Key words: Corona- Effect-Free –mask- distribution – public-mysore