ಕೊರೋನಾ ಎಫೆಕ್ಟ್:  ದೆಹಲಿಯ ಎಲ್ಲಾ ಹೋಟೆಲ್ ರೆಸ್ಟೋರೆಂಟ್ ಬಂದ್: ಆದೇಶ ಉಲ್ಲಂಘಿಸಿದ್ರೆ ಕೇಸ್….

ನವದೆಹಲಿ,ಮಾ,19,2020(www.justkannada.in):  ದೇಶದಲ್ಲಿ ಕೊರೋನಾ ಸೋಂಕು ಹರಡುತ್ತಿರುವ ಹಿನ್ನೆಲೆ ಅದನ್ನ ತಡೆಗಟ್ಟಲು ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಕಠಿಣ ನಿರ್ಧಾರ ತೆಗೆದುಕೊಂಡಿದ್ದಾರೆ.

ಮಾರ್ಚ್ 31ರವರೆಗೆ ನವದೆಹಲಿಯ ಎಲ್ಲಾ ಹೋಟೆಲ್, ರೆಸ್ಟೋರೆಂಟ್ ಎಲ್ಲಾ ಶಿಕ್ಷಣ ಸಂಸ್ಥೆಗಳನ್ನ ಮುಚ್ಚುವಂತೆ ಸಿಎಂ ಅರವಿಂದ ಕೇಜ್ರಿವಾಲ್ ಆದೇಶ ಹೊರಡಿಸಿದ್ದಾರೆ. ಹಾಗೆಯೇ  20ಕ್ಕೂ ಹೆಚ್ಚು ಜನ ಸೇರಬಾರದು.  20ಕ್ಕೂ ಹೆಚ್ಚು ಜನ ಸೇರಿದರೇ ಬಂಧಿಸಲಾಗುತ್ತದೆ. ಕೊರೋನಾ ಹಿನ್ನೆಲೆ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ ಎಂದು ಅರವಿಂದ್ ಕೇಜ್ರಿವಾಲ್ ತಿಳಿಸಿದ್ದಾರೆ.

ಸರ್ಕಾರದ ಆದೇಶ ಉಲ್ಲಂಘಿಸಿದ್ರೆ ಬಂಧನ ಮಾಡಲಾಗುತ್ತದೆ.  ಅದೇಶ ಪಾಲಿಸದವರ ವಿರುದ್ದ ಕ್ರಿಮಿನಲ್ ಕೇಸ್ ಹಾಗೂ  ತಕ್ಷಣ ಬಂಧಿಸಿ ಎಫ್ ಐಆರ್  ಹಾಕಲು ನಿರ್ಧಾರ ಮಾಡಲಾಗಿದೆ ಎಂದು ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ತಿಳಿಸಿದ್ದಾರೆ.  ಸ್ಟಾಂಪ್ ಹಾಕಿಸಿಕೊಂಡವರು ಹೊರಗೆ ಬರುವಂತಿಲ್ಲ. ಸ್ವಚ್ಛತೆ, ಆರೋಗ್ಯವನ್ನ ಕಾಪಾಡಿಕೊಳ್ಳಿ ಎಂದು ಕೇಜ್ರಿವಾಲ್ ಸಲಹೆ ನೀಡಿದ್ದಾರೆ.ಕರ್ನಾಟಕ ಮಹಾರಾಷ್ಟ್ರದ ಬಳಿಕ ದೆಹಲಿಯಲ್ಲೂ ಸ್ಟಾಂಪಿಂಗ್ ವ್ಯವಸ್ಥೆ ಜಾರಿಗೆ ತರಲಾಗಿದೆ.

Key words: Corona Effect- All- Hotel -Restaurant -Bandh  Delhi-CM-arvinda kejriwal