Wednesday, August 12, 2026

BDA Apartments

Home Front Page ಬೆಂಗಳೂರಿನಲ್ಲಿ ಮತ್ತೆ ನಾಲ್ಕು ರೂಪಾಂತರ ಕೊರೋನಾ ಪಾಸಿಟಿವ್ ಕೇಸ್ ಪತ್ತೆ…

ಬೆಂಗಳೂರಿನಲ್ಲಿ ಮತ್ತೆ ನಾಲ್ಕು ರೂಪಾಂತರ ಕೊರೋನಾ ಪಾಸಿಟಿವ್ ಕೇಸ್ ಪತ್ತೆ…

ಬೆಂಗಳೂರು,ಡಿಸೆಂಬರ್,30,2020(www.justkannada.in): ರಾಜ್ಯದಲ್ಲಿ ಬ್ರಿಟನ್ ರೂಪಾಂತರ ಕೊರೋನಾ ಸೋಂಕು ಕಂಡು ಬರುತ್ತಿದ್ದು ಇದೀಗ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮತ್ತೆ ನಾಲ್ವರಿಗೆ ಹೊಸ ಪ್ರಭೇದದ ಕೊರೋನಾ ಪತ್ತೆಯಾಗಿದೆ.

ಕಳೆದ ನಿನ್ನೆಯಷ್ಟೇ ಬೆಂಗಳೂರಿನಲ್ಲಿ ಮೂವರಿಗೆ ರೂಪಾಂತರ ಕೊರೋನಾ ಪತ್ತೆಯಾಗಿತ್ತು. ಇದೀಗ ಬೆಂಗಳೂರಿನ ಮಹದೇವಪುರ ವಲಯದ ಮೂವರಿಗೆ ಮತ್ತು ಪಶ್ಚಿಮ ವಲಯದ ಒಬ್ಬರಿಗೆ ರೂಪಾಂತರ ಕೊರೋನಾ ಪತ್ತೆಯಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.corona-detects-four-bengaluru

ಈ ಕುರಿತು ವರದಿ ಬಿಡುಗಡೆ ಮಾಡಿರುವ ಐಸಿಎಂಆರ್, ಇಂದು ಹೊಸದಾಗಿ ದೇಶದಲ್ಲಿಬ್ರಿಟನ್ ನಿಂದ ಬಂದ ವಿದೇಶಿಗರಲ್ಲಿ 20 ಜನರಿಗೆ ರೂಪಾಂತರಿ ವೈರಸ್ ದೃಢಪಟ್ಟಿದೆ. ದೆಹಲಿಯಲ್ಲಿ 8, ಕೊಲ್ಕೊತ್ತಾದಲ್ಲಿ 1, ಪುಣೆ 1, ಬೆಂಗಳೂರಿನಲ್ಲಿ 4, ಸಿಸಿಎಂಬಿ 2, ಐಜಿಐಬಿ 1 ಸೇರಿದಂತೆ ಒಟ್ಟು 20 ಜನರಿಗೆ ಹೊಸದಾಗಿ ರೂಪಾಂತರ ವೈರಸ್ ಸೋಂಕು ತಗುಲಿರುವುದು ದೃಢಪಟ್ಟಿರುವುದಾಗಿ ತಿಳಿಸಿದೆ.

Key words: Corona –detects- four – Bengaluru