ಮೊಬೈಲ್ ಕಾಲರ್ ಟೋನ್’ನಲ್ಲಿ ಕೊರೊನಾ ಕೆಮ್ಮು ! ಸದನದಲ್ಲೂ ಚರ್ಚೆ

ಬೆಂಗಳೂರು, ಮಾರ್ಚ್ 11, 2020 (www.juskannada.in): ಕೊರೋನಾ ವೈರಸ್ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ತಂದ ಈ ಕಾಲರ್ ಟ್ಯೂನ್ ಈಗ ಜನರಿಗೆ ಕಿರಿ ಕಿರಿಯಾಗುತ್ತಿದೆ.

ಈಗ ಯಾರಿಗೇ ಕಾಲ್ ಮಾಡಿದರೂ ಮೊದಲನೆಯದಾಗಿ ಕೇಳೋದೇ ಕರ್ಕಶ ಕೆಮ್ಮಿನ ಸದ್ದು ಕೇಳಿಸುತ್ತಿದೆ. ಈ ಬಗ್ಗೆ ಸದನದಲ್ಲೂ ಚರ್ಚೆಯಾಗಿದೆ. ಸಂವಿಧಾನದ ಮೇಲಿನ ಚರ್ಚೆ ಸಂದರ್ಭದಲ್ಲಿ ಜೆಡಿಎಸ್ ಶಾಸಕ ಟಿಎ ಶರವಣ ಈ ವಿಚಾರವನ್ನು ಪ್ರಸ್ತಾಪಿಸಿದ್ದಾರೆ.

ಕೊರೋನಾ ಕಾಲರ್ ಟ್ಯೂನ್ ನಿಂದ ಆಗುತ್ತಿರುವ ಸಮಸ್ಯೆಗಳನ್ನು ವಿವರಿಸಿದ ಅವರು ಇದನ್ನು ನಿಲ್ಲಿಸಲು ಯಾವುದಾದರೂ ಕ್ರಮ ಕೈಗೊಳ್ಳಿ ಎಂದು ಸಚಿವ ಮಾಧು ಸ್ವಾಮಿಯವರಿಗೆ ಮನವಿ ಮಾಡಿದರು.