ನಂಜನಗೂಡಿನ ನಂಜುಂಡೇಶ್ವರನ ಸನ್ನಿಧಿಯಲ್ಲಿ ಮಗನ ಮುಡಿ ತೆಗೆಸಿ ಹರಕೆ ತೀರಿಸಿದ ಯಶ್-ರಾಧಿಕಾ ಕುಟುಂಬ

ಮೈಸೂರು, ಮಾರ್ಚ್ 11, 2020 (www.juskannada.in): ನಂಜನಗೂಡಿನ ನಂಜುಂಡೇಶ್ವರ ಸನ್ನಿಧಿಯಲ್ಲಿ ಇಂದು ಬೆಳ್ಳಂಬೆಳಿಗ್ಗೆ ಕಾಣಿಸಿಕೊಂಡ ಯಶ್ ಮತ್ತು ರಾಧಿಕಾ ಕುಟುಂಬ ಸದಸ್ಯರು ಕಾಣಿಸಿಕೊಂಡು ಅಭಿಮಾನಿಗಳ ಆಶ್ಚರ್ಯಕ್ಕೆ ಕಾರಣರಾದರು.

ನಂಜುಂಡೇಶ್ವರನ ಸನ್ನಿಧಿಯಲ್ಲಿ ಮಗನಿಗೆ ಮುಡಿ ತೆಗೆಸಿ ಹರಕೆ ತೀರಿಸಿದ ಯಶ್. ದೇವಾಲಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಯಶ್ ಮತ್ತು ರಾಧಿಕಾ ಗೆ ರಾಜಾತಿಥ್ಯ ನೀಡಿದ ಅರ್ಚಕರು ಮತ್ತು ಆಡಳಿತ ಮಂಡಳಿ.

ದೇವಾಲಯದ ಗರ್ಭಗುಡಿಯ ಮುಂಭಾಗದಲ್ಲಿ ಯಶ್ ಮತ್ತು ರಾಧಿಕಾ ದಂಪತಿ ಕುಳಿತು ಭಕ್ತಿ ಪೂರ್ವಕ ನಮನ ಸಲ್ಲಿಸಿದರು. ಕನ್ನಡದ ಪ್ರಸಿದ್ಧ ಸೂಪರ್ಸ್ಟಾರ್ ಆಗಿರುವ ಯಶ್ ಗೆ ಪೂಜೆ ಮಾಡಿ ಕೊಡಲು ಮುಗಿಬಿದ್ದ ದೇವಾಲಯದ ಅರ್ಚಕರು. ಯಶ್ ಮತ್ತು ರಾಧಿಕಾ ನೋಡಿ ಫಿದಾ ಆದ ಅಭಿಮಾನಿಗಳು ಮತ್ತು ಭಕ್ತರು.

ರಾಜಕಾರಣಿಗಳು ಮತ್ತು ಹಿರಿಯ ನಟರಿಗೂ ದೇವಾಲಯದಲ್ಲಿ ಸಿಗದ ರಾಜಾತಿಥ್ಯ ಯಶ್ ಮತ್ತು ರಾಧಿಕಾ ಗೆ ನೀಡಿದ ಅರ್ಚಕರು ಮತ್ತು ಆಡಳಿತ ಮಂಡಳಿ.