ಕಾಂಗ್ರೆಸ್‌ನವರು ಅವರ ಸಮಾಧಿ ಅವರೇ ತೋಡಿಕೊಳ್ಳುತ್ತಿರುವುದು ಖಾತರಿ : ಸಚಿವ ಡಾ.ಕೆ.ಸುಧಾಕರ್‌

ಚಿಕ್ಕಬಳ್ಳಾಪುರ,ಡಿಸೆಂಬರ್,18,2020(www.justkannada.in) :  ಹಿಂದಿನ ಯುಪಿಎ ಸರ್ಕಾರದ ಅವಧಿಯಲ್ಲಿ ಪ್ರತಿದಿನ ಒಂದಲ್ಲಾ ಒಂದು ಹಗರಣದಿಂದ ಜನ ರೋಸಿ ಹೋಗಿದ್ದರು. ಹೀಗಾಗಿಯೇ ಒಂದೊಂದೇ ರಾಜ್ಯಗಳಲ್ಲಿ ಕಾಂಗ್ರೆಸ್‌ ಅಸ್ತಿತ್ವ ಕಳೆದುಕೊಳ್ಳುತ್ತಿದೆ. ಕಾಂಗ್ರೆಸ್‌ ಸಮಾಧಿ ತೋಡಿಕೊಂಡಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ಟೀಕಿಸಿದ್ದಾರೆ.

Teachers,solve,problems,Government,bound,Minister,R.Ashokಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯವೈಖರಿಯನ್ನು ಇಡೀ ಜಗತ್ತೇ ಮೆಚ್ಚಿಕೊಂಡಿದೆ. ದೇಶಾದ್ಯಂತ ಜನರು ಮೋದಿ ಅವರ ಸರ್ಕಾರದ ಹಗರಣ ಮುಕ್ತ ಆಡಳಿತದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಬಿಜೆಪಿಯನ್ನು ಬೆಂಬಲಿಸುತ್ತಿದ್ದಾರೆ ಎಂದರು.

Congressman-grave-theirs-Digging-Warranty-Minister-Dr.K.Sudhakar

ಮೊನ್ನೆ ರಾಜ್ಯ ವಿಧಾನಪರಿಷತ್ತಿನಲ್ಲಿ ಕಾಂಗ್ರೆಸ್‌ನವರ ನಡುವಳಿಕೆ ಗಮನಿಸಿದ ಮೇಲೆ ಅವರನ್ನು ಬೇರೆ ಯಾವುದೇ ಪಕ್ಷ ವಿರೋಧಿಸುವ ಅಥವಾ ಹಿಂದಿಕ್ಕುವ ಅಗತ್ಯವಿಲ್ಲ ಅವರ ಸಮಾಧಿ ಅವರೇ ತೋಡಿಕೊಳ್ಳುತ್ತಿರುವುದು ಖಾತರಿಯಾದಂತಾಗಿದೆ ಎಂದು ಲೇವಡಿ ಮಾಡಿದರು.

key words : Congressman-grave-theirs-Digging-Warranty-Minister-Dr.K.Sudhakar