ಕೊರೊನಾಗೆ  ಕಾಂಗ್ರೆಸ್​ ಶಾಸಕ ನಿಧನ

ಬೆಂಗಳೂರು,ಸೆಪ್ಟೆಂಬರ್,24,2020(www.justkannada.in) : ಕೊರೊನಾ ಗೆ ತುತ್ತಾಗಿದ್ದ ಬಸವಕಲ್ಯಾಣ ಕ್ಷೇತ್ರದ ಕಾಂಗ್ರೆಸ್​ ಶಾಸಕ ಬಿ. ನಾರಾಯಣರಾವ್​(65) ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ಮಧ್ಯಾಹ್ನ ನಿಧನರಾಗಿದ್ದಾರೆ.jk-logo-justkannada-logoಕೊರೊನಾ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಅವರನ್ನು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ಸೆ.1ರಂದು ದಾಖಲಾಗಿಸಲಾಗಿತ್ತು. ಸುಮಾರು 25 ದಿನಗಳಿಂದ ಚಿಕಿತ್ಸೆ ನೀಡಲಾಗುತ್ತಿತ್ತು.

Congress-legislator-dies-Corona

ಶ್ವಾಸಕೋಶ ಸಮಸ್ಯೆ, ನ್ಯೂಮೋನಿಯಾ, ಅಧಿಕ ರಕ್ತದೊತ್ತಡ ಹಾಗೂ ಶುಗರ್ ನಿಂದಾಗಿ ಆರಂಭದಲ್ಲಿಯೇ ಅವರ ಆರೋಗ್ಯ ಬಿಗಡಾಯಿಸಿತ್ತು. ಹೀಗಾಗಿ ಆಸ್ಪತ್ರೆಗೆ ದಾಖಲಾದ ಎರಡನೇ ದಿನವೇ ಅವರಿಗೆ ಕೃತಕ ಉಸಿರಾಟ ವ್ಯವಸ್ಥೆ ಮಾಡಲಾಗಿತ್ತು.

ಹೀಗಾಗಿಯೂ, ಮಂಗಳವಾರ ರಾತ್ರಿಯಿಂದ ಅವರ ಆರೋಗ್ಯ ಸ್ಥಿತಿ ಮತ್ತಷ್ಟು ಗಂಭೀರವಾಗಿತ್ತು. ಚಿಕಿತ್ಸೆ ಫಲಿಸದೆ ಗುರುವಾರ ಮಧ್ಯಾಹ್ನ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

key words : Congress-legislator-dies-Corona

English summary

Mr Narayan Rao was admitted to Manipal Hospital, Old Airport Road on 1-9-2020 diagnosed of Severe COVID-19 infection passed away at 3.55p.m,he was 65 yrs old.
He was critically ill with multi-organ failure on multiple supports including ventilator in the Intensive care unit under constant observation by our expert panel of doctors.
We deeply regret the loss and express our condolences to his family and friends.
Dr Manish Rai
Hospital Director
Manipal Hospitals Old Airport road