Monday, October 12, 2026

Dasara Wishes

BJP DasraWishes_JK DasraWishes JK
Happy Dasara
Home Front Page ಕಾಂಗ್ರೆಸ್ ಸೇರಿದ್ರೆ ಟಿಕೆಟ್: ಜೆಡಿಎಸ್ ಶಾಸಕನಿಗೆ ಆಹ್ವಾನ ನೀಡಿದ ಮಾಜಿ ಸಿಎಂ ಸಿದ್ಧರಾಮಯ್ಯ.

ಕಾಂಗ್ರೆಸ್ ಸೇರಿದ್ರೆ ಟಿಕೆಟ್: ಜೆಡಿಎಸ್ ಶಾಸಕನಿಗೆ ಆಹ್ವಾನ ನೀಡಿದ ಮಾಜಿ ಸಿಎಂ ಸಿದ್ಧರಾಮಯ್ಯ.

ತುಮಕೂರು,ನವೆಂಬರ್,1,2021(www.justkannada.in):  ಈಗಾಗಲೇ ಜೆಡಿಎಸ್ ನಿಂದ ಅಂತರ ಕಾಯ್ದುಕೊಂಡು ಕಾಂಗ್ರೆಸ್ ಸೇರುವ ಕುರಿತು ಸುಳಿವು ನೀಡಿರುವ ಗುಬ್ಬಿ ಕ್ಷೇತ್ರದ ಶಾಸಕ ಎಸ್.ಆರ್ ಶ್ರೀನಿವಾಸ್ ಗೆ ಕಾಂಗ್ರೆಸ್ ಸೇರುವಂತೆ ಮಾಜಿ ಸಿಎಂ ಸಿದ್ಧರಾಮಯ್ಯ ಆಹ್ವಾನ ನೀಡಿದ್ದಾರೆ.

ಈ ಕುರಿತು ತುಮಕೂರಿನ ಗುಬ್ಬಿಯಲ್ಲಿ ಮಾತನಾಡಿದ ವಿಪಕ್ಷ ನಾಯಕ ಸಿದ್ಧರಾಮಯ್ಯ, ಎಸ್.ಆರ್ ಶ್ರೀನಿವಾಸ್ ಕಾಂಗ್ರೆಸ್ ಸೇರಿದರೇ ಮುಂದಿನ ಚುನಾವಣೆಗೆ ಟಿಕೆಟ್ ನೀಡುತ್ತೇವೆ. ಎಸ್.ಆರ್ ಶ್ರೀನಿವಾಸ್ ಮುಂದಿನ ಕಾಂಗ್ರೆಸ್ ಅಭ್ಯರ್ಥಿ ಎಂದು ಘೋಷಣೆ ಮಾಡಿದರು.

ಕಾಂಗ್ರೆಸ್ ಸೇರುವಂತೆ ಶ್ರೀನಿವಾಸ್ ಗೆ ಅನೇಕ ಬಾರಿ ಕರೆದಿದ್ದೆ. ಜೆಡಿಎಸ್ ಮುಳುಗುತ್ತಿರುವ ಹಡಗು. ಜೆಡಿಎಸ್ ನವರು ಅವಕಾಶವಾದಿಗಳು ಎಂದಿದ್ದೆ. ಆದರೆ ಇಲ್ಲ ಅಣ್ಣ ಬರಲ್ಲ ಎಂದು ಶ್ರೀನಿವಾಸ್ ಹೇಳಿದ್ದರು. ಈಗ ಪಕ್ಷಕ್ಕೆ ಬಂದ್ರೆ ಟಿಕೆಟ್ ನೀಡುತ್ತೇವೆ ಎಂದು ಸಿದ್ಧರಾಮಯ್ಯ ತಿಳಿಸಿದರು.

ನಾನು ಏನೇ ಹೇಳಿದರು ಹೆಚ್.ಡಿಕೆ ಜಾತಿ ಬಣ್ಣ ಕಟ್ಟುತ್ತಾರೆ. ನಾನು ಅಕ್ಕಿ ಕೊಟ್ಟಿದ್ದು ಒಂದು ಜಾತಿಗಾ..? ಜೆಡಿಎಸ್ ನವರು ರಾಜಕಾರಣಕ್ಕಾಗಿ ಜಾತಿಬಣ್ಣ ಕಟ್ಟುತಿದ್ದಾರೆ. ಬಿಜೆಪಿಯವರು ಅನ್ನಭಾಗ್ಯ ಕೇಂದ್ರ ಸರ್ಕಾರದ ಯೋಜನೆ ಅಂತಾರೆ. ಹಾಗಾದ್ರೆ ಗುಜರಾತ್, ಮಧ್ಯಪ್ರದೇಶ, ಬಿಹಾರದಲ್ಲಿ ಏಕೆ ಉಚಿತ ಅಕ್ಕಿ ನೀಡುತ್ತಿಲ್ಲ ಎಂದು ಪ್ರಶ್ನಿಸಿದರು.

Key words: Congress-ticket-Former CM- Siddaramaiah- invited -JDS MLA.