ದಾವಣಗೆರೆ, ಮಾರ್ಚ್,25,2026 (www.juskannada.in): ಯಾವುದೇ ಕಾರಣಕ್ಕೂ ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣಾ ಕಣದಿಂದ ಹಿಂದೆ ಸರಿಯಲ್ಲ. ನಾನು ಸ್ಪರ್ಧಾ ಕಣದಿಂದ ಹಿಂದೆ ಸರಿದಿಲ್ಲ ಎಂದು ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಸಾದಿಕ್ ಪೈಲ್ವಾನ್ ತಿಳಿಸಿದರು.
ಇಂದು ಮಾತನಾಡಿ ಸ್ಪಷ್ಟನೆ ನೀಡಿದ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಸಾದಿಕ್ ಪೈಲ್ವಾನ್, ಈ ಚುನಾವಣೆಯಲ್ಲಿ ಕಾಂಗ್ರೆ್ಸ್ ಗೆ ತಕ್ಕಪಠ ಕಲಿಸುತ್ತೇಣೆ ನನಗೆ ಕರೆ ಬಂದವು ನಾನು ಯಾರ ಕರೆಯನ್ನೂ ಸ್ವೀಕಾರ ಮಾಡಿಲ್ಲ. ಲೋಕಸಭೆ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ತಕ್ಕ ಪಾಠ ಕಳಿಸುತ್ತೇವೆ ಜಮೀರ್ ಪ್ರಚಾರಕ್ಕೆ ಬಂದರೆ ಗೋಬ್ಯಾಕ್ ಎಂದು ಕೂಗುತ್ತೇವೆ ಎಂದರು.
ನನ್ನ ಜೊತೆ ಮಾತಾಡುವ ಬದಲು ಸಮುಯದಾಯದವರ ಜತೆ ಮಾತಾಡಲಿ. ಮುಸ್ಲೀಮ ಸಮುದಾಯಕ್ಕೆ ಕಾಂಗ್ರೆಸ್ ಮೋಸ ಮಾಡಿದೆ. ದೇವರೆ ಬಂದು ಹೇಳಿದರೂ ನಮ್ಮ ಜನ ಕೇಳುವ ಸ್ಥಿತಿಯಲ್ಲಿ ಇಲ್ಲ. ಹಿಂದೆ ಸರಿಯುತ್ತಾರೆ ಎಂದು ವದಂತಿ ಹಬ್ಬಿದೆ . ನಾನು ಚುನಾವಣೆಯಿಂದ ಹಿಂದೆ ಸರಿಯುವುದಿಲ್ಲ ಎಂದು ಸಾದಿಕ್ ಫೈ;ಲ್ವಾನ್ ತಿಳಿಸಿದರು.
Key words: not, withdraw, election, Congress, rebel candidate







