ಕಾಂಗ್ರೆಸ್ಸಿಗರು ರಾಹುಲ್ ಗಾಂಧಿ ಕರೆಸಿ ಮುಖ ತೋರಿಸಿ ವೋಟ್ ಪಡೆಯಲಿ- ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ತಿರುಗೇಟು.

ಶಿವಮೊಗ್ಗ,ಏಪ್ರಿಲ್,10,2023(www.justkannada.in): ನಿನ್ನೆ ಪ್ರಧಾನಿ ನರೇಂದ್ರ ಮೋದಿ ಬಂಡಿಪುರಕ್ಕೆ ಭೇಟಿ ನೀಡಿ ಸಫಾರಿ ನಡೆಸಿದ್ದನ್ನು ಟೀಕಿಸಿದ್ದ ರಾಜ್ಯ ಕಾಂಗ್ರೆಸ್ ಗೆ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ತಿರುಗೇಟು ನೀಡಿದ್ದಾರೆ.

ಈ ಕುರಿತು ಮಾತನಾಡಿದ ಕೆ.ಎಸ್ ಈಶ್ವರಪ್ಪ,  ಕಾಂಗ್ರಸ್ಸಿಗರು ರಾಹುಲ್ ಗಾಂಧಿ ಕರೆಸಲಿ. ರಾಹುಲ್ ಗಾಂಧಿ ಮುಖ ತೋರಿಸಿ ವೋಟ್ ಪಡೆಯಲಿ ವಿಶ್ವನಾಯಕ ಮೋದಿ ಕರೆಸುವುದು ನಮ್ಮ ಹೆಮ್ಮೆ. ಮೋದಿ ಶಾ ನಾಯಕತ್ವ ಬಿಜೆಪಿಗಿದೆ ಎಂದರು.

224 ಕ್ಷೇತ್ರಗಳಲ್ಲಿ ಬಿಜೆಪಿ ಸ್ಪರ್ಧೆ ಮಾಡಲಿದೆ. ಸಂಜೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡುವುದಾಗಿ ಹೇಳಿದ್ದಾರೆ. ಯಾವುದೇ ಗೊಂದಲ ಇಲ್ಲದೆ ಬಿಜೆಪಿ ಪಟ್ಟಿ ಬಿಡುಗಡೆ ಮಾಡುತ್ತಾರೆ ಎಂದು ಕೆಎಸ್ ಇ ವಿಶ್ವಾಸ ವ್ಯಕ್ತಪಡಿಸಿದರು.

Key words: Congress –Rahul Gandhi – his face – get votes- Former minister- KS Eshwarappa