Wednesday, August 12, 2026

BDA Apartments

Home Front Page ದುಬೈನಿಂದ ಮೈಸೂರಿಗೆ ವಾಪಸ್ಸಾದ ಶಾಸಕ ತನ್ವೀರ್ ಸೇಠ್: ಪಟಾಕಿ ಸಿಡಿಸಿ ಸಂಭ್ರಮಿಸಿದ ಬೆಂಬಲಿಗರು…

ದುಬೈನಿಂದ ಮೈಸೂರಿಗೆ ವಾಪಸ್ಸಾದ ಶಾಸಕ ತನ್ವೀರ್ ಸೇಠ್: ಪಟಾಕಿ ಸಿಡಿಸಿ ಸಂಭ್ರಮಿಸಿದ ಬೆಂಬಲಿಗರು…

ಮೈಸೂರು,ಫೆ,24,2020(www.justkannada.in):  ಮಾರಣಾಂತಿಕ ಹಲ್ಲೆಗೊಳಗಾಗಿ ಕೊಲಂಬಿಯಾ ಏಷ್ಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ದುಬೈಗೆ ತೆರಳಿದ್ದ ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ಇಂದು ಮೈಸೂರಿಗೆ ವಾಪಸ್ ಆಗಿದ್ದಾರೆ.

ಶಾಸಕ ತನ್ವೀರ್ ಸೇಠ್ ದುಬೈನಿಂದ ಮೈಸೂರಿಗೆ ವಾಪಸ್ಸಾದ್ದು ಈ ಹಿನ್ನೆಲೆ ತನ್ವೀರ್ ಸೇಠ್ ಅವರ ಬೆಂಬಲಿಗರು ಕೊಲಂಬಿಯಾ ಏಷ್ಯಾ ಬಳಿ ಸಂಭ್ರಮಿಸಿದರು.  ಪಟಾಕಿ ಸಿಡಿಸಿ ಘೋಷಣೆ ಕೂಗಿ  ತನ್ವೀರ್ ಸೇಠ್ ಅವರನ್ನ ಬರಮಾಡಿಕೊಂಡರು.

ಕಳೆದ ನೆವೆಂಬರ್ ನಲ್ಲಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ಶಾಸಕ ತನ್ವೀರ್ ಸೇಠ್ ಮೇಲೆ ಫರ್ಹಾನ್ ಪಾಷಾ ಎಂಬಾತ ಮಾರಣಾಂತಿಕ ಹಲ್ಲೆ ನಡೆಸಿದ್ದ. ಹಲ್ಲೆಯಿಂದ ತೀವ್ರವಾಗಿ ಗಾಯಗೊಂಡಿದ್ದ ತನ್ವೀರ್ ಸೇಠ್ ಅವರನ್ನ ಕೂಡಲೇ  ಮೈಸೂರಿನ ಕೊಲಂಬಿಯಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ನಂತರ ತನ್ವೀರ್ ಸೇಠ್ ಚಿಕಿತ್ಸೆಗಾಗಿ ದುಬೈಗೆ ತೆರಳಿದ್ದರು.

Key words: congress MLA-Tanveer Seth –come-Mysore-from- Dubai – celebrated- supporters.