ಬಿಜೆಪಿಯಲ್ಲಿ ಉಸಿರುಗಟ್ಟುವ ವಾತಾವರಣ, ರಮೇಶ್ ಜಾರಕಿಹೊಳಿ ಸೇರಿದಂತೆ ಹಲವು ಶಾಸಕರು ಕೈ ಸಂಪರ್ಕದಲ್ಲಿದ್ದಾರೆ: ಉಗ್ರಪ್ಪ ಸಿಡಿಸಿದ ಹೊಸ ಬಾಂಬ್

ಬೆಂಗಳೂರು, ಜೂನ್ 02, 2020 (www.justkannada.in): ರಮೇಶ್ ಜಾರಕಿಹೊಳಿ ನನ್ನ‌ ಸಹೋದರ. ನಾವಿಬ್ಬರೂ ಒಂದೇ ಗೋತ್ರಕ್ಕೆ ಸೇರಿದವರು. ಡಿಸಿಎಂ ಆಗ್ಬೇಕು ಅಂತ ಕನಸು ಕಂಡಿದ್ದರು. ಆದರೆ ಬಿಜೆಪಿಯಲ್ಲಿ ಉಸಿರುಗಟ್ಟುವ ವಾತಾವರಣವಿದೆ. ಅದಕ್ಕೆ ಅವರು ನಮ್ಮ‌ಸಂಪರ್ಕದಲ್ಲಿದ್ದಾರೆ ಎಂದು ಕಾಂಗ್ರೆಸ್ ನಾಯಕ ಉಗ್ರಪ್ಪ ಹೊಸ ಬಾಂಬ್ ಸಿಡಿಸಿದ್ದಾರೆ.

ರಮೇಶ್ ಸೇರಿ ಇನ್ನು ಕೆಲವರು ನಮ್ಮ ಸಂಪರ್ಕದಲ್ಲಿದ್ದಾರೆ. ನಮ್ಮ ಒಬ್ಬೇ ಒಬ್ಬ ಶಾಸಕರು ಅವರ ಸಂಪರ್ಕದಲ್ಲಿದ್ದರೆ ತಿಳಿಸಲಿ. ನಾನು ಓಪನ್ ಚಾಲೆಂಜ್ ಹಾಕ್ತೇನೆ. ಯಾರ್ಯಾರು ನಮ್ಮ ಸಂಪರ್ಕದಲ್ಲಿದ್ದಾರೆ ಅವರನ್ನ ಬಹಿರಂಗ ಪಡಿಸ್ತೇನೆ. ಇಲ್ಲಿಂದ ಹೋದವರು ಬೇರೆ ಬೇರೆ ದಾರಿ ಹುಡುಕುತ್ತಿದ್ದಾರೆ. ಸೂಕ್ತ ಸಂದರ್ಭದಲ್ಲಿ ನಾನು ಇದನ್ನ ತಿಳಿಸ್ತೇನೆ ಎಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಓಪನ್ ಚಾಲೆಂಜ್ ಮಾಡಿದ್ದಾರೆ.

ಶ್ರೀರಾಮುಲು ರಾಜೀನಾಮೆ ನೀಡಲಿ: ಸಚಿವ ಶ್ರೀರಾಮುಲು ಸಮಾಜಕ್ಕೆ ಮಾರಕವಾದ ಕೆಲಸ ಮಾಡಿದ್ದಾರೆ. ಅವರಿಗೆ ಬದ್ಧತೆ ಇದ್ದರೆ ಕ್ಷಮೆಯಾಚಿಸಬೇಕು. ನೈತಿಕ ಹೊಣೆಯನ್ನ‌ಹೊತ್ತು ರಾಜೀನಾಮೆ ನೀಡಬೇಕು. ಇಲ್ಲ ಸಿಎಂ ರಾಜೀನಾಮೆಯನ್ನ ಪಡೆದುಕೊಳ್ಳಬೇಕು ಎಂದು ಉಗ್ರಪ್ಪ ಒತ್ತಾಯಿಸಿದ್ದಾರೆ.